ಯೋಜನೆಗಳು ಐದು ವರ್ಷ ಮುಂದುವರೆಯಲಿದೆ – ಡಿಕೆಶಿ ಸ್ಪಷ್ಟನೆ

geetha

ಬುಧವಾರ, 31 ಜನವರಿ 2024 (15:45 IST)
ಬೆಂಗಳೂರು : ಕಾಂಗ್ರೆಸ್‌ ಸೋತರೆ ಕಾಂಗ್ರೆಸ್‌ ಪಕ್ಷದ ಗ್ಯಾರೆಂಟಿ ಯೋಜನೆಗಳು ರದ್ದಾಗಬಹುದು ಎಂದು ಮಾಗಡಿ ಶಾಸಕ ಬಾಲಕೃಷ್ಣ ನೀಡಿದ್ದ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಗ್ಯಾರೆಂಟಿ ಯೋಜನೆಗಳು ಐದು ವರ್ಷಗಳ ಮುಂದುವರೆಯಲಿದೆ ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ. ಈ ಹೇಳಿಕೆಯನ್ನು ಈ ಮುಂಚೆ ಬಿಜೆಪಿಯವರೂ ಸಹ ನೀಡಿದ್ದರು. ಬಿಜೆಪಿಗೆ ಮತ ನೀಡದಿದ್ದರೆ ಕರ್ನಾಟಕಕ್ಕೆ ಕೇಂದ್ರದ ಯೋಜನೆಗಳು ಸಿಗುವುದಿಲ್ಲ ಎಂದಿದ್ದರು. ಶಾಸಕ ಬಾಲಕೃ‌ಷ್ಣ ಸಹ ಅದೇ ಧಾಟಿಯಲ್ಲಿ ಹೇಳಿಕೆ ನೀಡಿರಬಹುದು ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ