ಅವಸರದ ನಿರ್ಧಾರವನ್ನು ನಾವು ತೆಗೆದುಕೊಳ್ಳುವುದಿಲ್ಲ: ಸಿಎಂ

ಗುರುವಾರ, 9 ಡಿಸೆಂಬರ್ 2021 (15:05 IST)
ಬೆಂಗಳೂರು : ಯಾವುದೇ ರೀತಿಯ ಅವಸರದ ನಿರ್ಧಾರವನ್ನು ನಾವು ತೆಗೆದುಕೊಳ್ಳುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೋವಿಡ್-19 ಕುರಿತು ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಎಸ್ಸಿ ಅಧ್ಯಕ್ಷರಾದ ಸುದರ್ಶನ್ ಅವರು ಈ ಕುರಿತು ನಮಗೆ ಎಲ್ಲ ಮಾಹಿತಿಯನ್ನು ನೀಡಿದ್ದಾರೆ. ಓಮಿಕ್ರಾನ್ ಕುರಿತು ಸಹ ಮಾಹಿತಿಯನ್ನು ನೀಡಿದ್ದಾರೆ. ಈಗಿರುವ ಪಾಸಿಟಿವಿಟಿ ರೇಟ್ ನೋಡಿದರೆ ಬಹಳ ಗಾಬರಿಯಾಗುವಂತಹ ಅವಶ್ಯಕತೆ ಇಲ್ಲ ಎಂಬುದು ಅವರ ವಾದವಾಗಿದೆ ಎಂದು ತಿಳಿಸಿದರು.
ಗಡಿಭಾಗದಲ್ಲಿ ಈಗಿರುವ ಕಟ್ಟೆಚ್ಚರವನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಅದರಲ್ಲಿಯೂ ಕೇರಳ ವಿದ್ಯಾರ್ಥಿಗಳಿಗೆ ಇರುವ ಎಚ್ಚರಿಕೆಗಳೆಲ್ಲ ಮುಂದುವರಿಯುತ್ತೆ. ಅವರಿಗೆ ಎಲ್ಲ ರೀತಿಯ ಟೆಸ್ಟ್ ಗಳನ್ನು ಮಾಡಿಸಲಾಗುತ್ತೆ.
ನೈಟ್ ಕಫ್ರ್ಯೂ, ಕ್ರಿಸ್ ಮಸ್ ಮತ್ತೆ ಹೊಸ ವರ್ಷಕ್ಕೆ ಇನ್ನೂ ಒಂದು ವಾರ ಈ ಸೋಂಕಿನ ಬೆಳವಣೆಗೆಯನ್ನು ನೋಡಿ ನಂತರ ಈ ಕುರಿತು ನಿರ್ಧರಿಸಲಾಗುತ್ತೆ. ನಂತರ ಈ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಯಾವುದೇ ಅವಸರದ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತಿಲ್ಲ ಎಂದರು.
ಅದರೂ ಸಹ ಈ ಬಗ್ಗೆ ನಾವು ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತೋರುವುದಿಲ್ಲ. ಅದರ ಬದಲು ನಾವು ಈ ಕುರಿತು ಹೆಚ್ಚಿನ ಗಮನ ಕೊಟ್ಟು ಮುಂಜಾಗ್ರತೆಯ ಕ್ರಮವನ್ನು ನಾವು ತೆಗೆದುಕೊಳ್ಳಬೇಕು. ಅದರಲ್ಲಿಯೂ ಹಾಸ್ಟೆಲ್ ಗಳಲ್ಲಿ ವಿಶೇಷವಾದ ಸೂಚನೆಯನ್ನು ನೀಡುತ್ತಿದ್ದೇವೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ