ಇಂದಿರಾ ಕ್ಯಾಂಟೀನ್ ಪುನರ್ ಆರಂಭ ಮಾಡಬೇಕು ಅಂತ ಚರ್ಚೆ ಮಾಡಿದ್ದೇವೆ- ಸಿಎಂ

ಸೋಮವಾರ, 12 ಜೂನ್ 2023 (17:01 IST)
ಇಂದಿರಾ ಕ್ಯಾಂಟೀನ್ ಆರಂಭ ಮಾಡುವ ವಿಚಾರವಾಗಿ ಸಿಎಂ ಸಭೆ ಮಾಡಿದ್ದು, ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಹೊಸ ಟೆಂಡರ್ ಕರೆಯುತ್ತೇವೆ.ಕ್ವಾಲಿಟಿ, ಕ್ವಾಂಟಿಟಿ ವಿಚಾರದಲ್ಲಿ ಕೂಡ ಹೆಚ್ಚಿನ ಒತ್ತು ಕೊಡುತ್ತೇವೆ.ಮತ್ತೊಮ್ಮೆ ಟೆಂಡರ್ ಆದ ಬಳಿಕ ರೀ ಲಾಂಚ್ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು.
 
ಇನ್ನೂ ಕೊಪ್ಪಳದ ಕಲುಷಿತ ನೀರು ಸೇವಿಸಿದ ಪ್ರಕರಣಕ್ಕೆ ತನಿಖೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಹೇಳಿದ್ರು.ಅಲ್ಲದೇ ಬೆಂಗಳೂರಲ್ಲಿ 250 ಇಂದಿರಾ ಕ್ಯಾಂಟೀನ್ ಮಾಡಲು ಕ್ರಮ ಕೈಗೊಳ್ಳಲು  ಸೂಚಿಸಿದ್ದೇನೆ.ಇದುವರೆಗೂ ಪಾಲಿಕೆ 70 % ಸರ್ಕಾರ 30 % ಕೊಡ್ತಿತ್ತು.ಇನ್ಮುಂದೆ ಸರ್ಕಾರ ಮತ್ತು ಪಾಲಿಕೆ ತಲಾ 50 % ಶೇರ್ ಇರಲಿದೆ.ಹೊಸದಾಗಿ ಎಲ್ಲಿಲ್ಲಿ ಇಂದಿರಾ ಕ್ಯಾಂಟೀನ್ ಅಗತ್ಯತೆ ಇದೆ ಅದರ ಪಟ್ಟಿ ಕೊಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.ಇಂದಿರಾ ಕ್ಯಾಂಟೀನ್‌ನಲ್ಲಿ ದರ ಪರಿಷ್ಕರಣೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ