100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡ್ಬೇಕು : ಸಿಎಂ

ಭಾನುವಾರ, 11 ಜೂನ್ 2023 (11:00 IST)
ಮೈಸೂರು : ಒಂದು ವರ್ಷದಲ್ಲಿ 100 ಯೂನಿಟ್ ವಿದ್ಯುತ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡಬೇಕು. ಇದು ದುರುಪಯೋಗ ಅಲ್ವಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
 
ಮೈಸೂರಿನ ವರುಣಾ ಕ್ಷೇತ್ರದಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ ಖರ್ಚಾಗುವ ಹಣ 59 ಸಾವಿರ ಕೋಟಿ ರೂ., ಉಳಿದ ಅವಧಿಗೆ ಬೇಕಾಗಿರುವ ಹಣ 41 ಸಾವಿರ ಕೋಟಿ ರೂ. ಪ್ರಧಾನಿ ಮೋದಿ ಅವರು ಗ್ಯಾರಂಟಿ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ, ರಾಜ್ಯ ದಿವಾಳಿಯಾಗುತ್ತೆ ಅಂತಾ ಹೇಳಿದ್ರು. ಬದಲಾಗಿ ಕೈ ಜೋಡಿಸುವ ಮಾತನ್ನಾಡಬೇಕಿತ್ತು ಎಂದು ಹೇಳಿದರು. 

ಎಲ್ಲರೂ 200 ಯೂನಿಟ್ ಫ್ರೀ ಕೊಡಿ ಅಂತಿದ್ದಾರೆ. ಯಾರು 190, 180, 70 ಯೂನಿಟ್ ಬಳಸುತ್ತಾರೋ ಅವೆಲ್ಲರಿಗೂ ಉಚಿತ ಇದೆ. ಅದಕ್ಕೆ ಒಂದು ವರ್ಷದ ಆವೇರೆಜ್ ತೆಗೆದುಕೊಳ್ಳಲು ಹೇಳಿದ್ದೇನೆ. ಅದರ ಜೊತೆಗೆ ಶೇ.10 ಹೆಚ್ಚುವರಿ ಫ್ರೀ ಇರುತ್ತೆ. ಒಂದು ವರ್ಷದಲ್ಲಿ 100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡಬೇಕು? ಇದು ದುರುಪಯೋಗ ಅಲ್ವಾ ಎಂದು ಪ್ರಶ್ನಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ