ನಮ್ಮಲ್ಲಿ ಯಾವುದೇ ಪೈಪೋಟಿ ಇಲ್ಲ

ಸೋಮವಾರ, 3 ಜುಲೈ 2023 (19:05 IST)
ವಿಪಕ್ಷ ನಾಯಕ ಸ್ಥಾನಕ್ಕೆ ನಮ್ಮಲ್ಲಿ ಯಾವುದೇ ಪೈಪೋಟಿ ಇಲ್ಲ. ಒಮ್ಮತದ ತೀರ್ಮಾನ ಆಗಲಿದೆ ಎಂದು ಶಾಸಕ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರದ ವೀಕ್ಷಕರ ತಂಡ ಇಂದು ಬರೋದಿಲ್ಲ. ಅವ್ರು ನಾಳೆ ಬರ್ತಾರೆ, ನಾಳೆ ಬಂದು ಶಾಸಕರಿಂದ ಅಭಿಪ್ರಾಯ ಸಂಗ್ರಹ ಮಾಡ್ತಾರೆ.ನಂತರ ಹೈಕಮಾಂಡ್ ನಾಯಕರು ವಿಪಕ್ಷ ನಾಯಕರ ಆಯ್ಕೆ ಮಾಡ್ತಾರೆ ಎಂದರು.. ಇನ್ನು ಬಸವರಾಜ ಬೊಮ್ಮಾಯಿ ವಿಪಕ್ಷ ನಾಯಕ ಆಗ್ತಾರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ್ರು, ಬೊಮ್ಮಾಯಿ‌ ಸಿಎಂ ಆಗಿ ಕೆಲಸ ಮಾಡಿದ ಅನುಭವ ಇದೆ.. ಅಂಕಿ ಸಂಖ್ಯೆ ಅವರಿಗೆ ಚೆನ್ನಾಗಿ ಗೊತ್ತಿದೆ. ಆದರೆ ಅಂತಿಮವಾಗಿ ಕೇಂದ್ರ ನಾಯಕರು ವೀಕ್ಷಕರು ವಿಪಕ್ಷ ನಾಯಕ ಯಾರು ಎಂದು ಘೋಷಣೆ ಮಾಡಲಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ