ಹಿಂದಿನ ಸರ್ಕಾರದ ಅವ್ಯವಹಾರನ್ನ ಜನತೆಗೆ ನಾವು ತೋರಿಸಬೇಕಿದೆ- ಬಿ ನಾಗೇಂದ್ರ

ಮಂಗಳವಾರ, 29 ಆಗಸ್ಟ್ 2023 (18:47 IST)
ಇಂದು ದೇಶದಾದ್ಯಂತ  ದ್ಯಾನಚಂದ್ ಹುಟ್ಟುಹಬ್ಬವನ್ನ ಕ್ರೀಡಾ ದಿನಾಚರಣೆಯಾಗಿ ಆಚರಿಸಲಾಗ್ತಿದೆ.ಕ್ರೀಡಾ ದಿನಾಚರಣೆಯನ್ನ ನಮ್ಮ‌ ಸರ್ಕಾರದಿಂದ ವಿಜ್ರಂಭಣೆಯಿಂದ‌  ಆಚರಿಸ್ತಿದ್ದೇವೆ.10ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಕ್ರೀಡಾ ದಿನಾಚರಣೆಯಲ್ಲಿ ಭಾಗವಹಿಸಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಕ್ರಿಡೆಯನ್ನ ಆಯೋಜನೆ ಮಾಡಿದ್ದೇವೆ .ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ಕೊಡುವ ಕೆಲಸವನ್ನ ನಮ್ಮ ಸರ್ಕಾರ ಮಾಡ್ತಿದೆ.ಮುಂದಿನ ದಿನದಲ್ಲಿ ಒಂದು ಜಿಲ್ಲೆ ಒಂದು ಕ್ರೀಡೆಯನ್ನ ಆಯೋಜನೆ ಮಾಡ್ತೇವೆ.ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ  ಬಿಜೆಪಿ ಚಾರ್ಜ್ ಶೀಟ್ ಹಾಕಲು ಮುಂದಾಗಿದೆ ಎಂಬ ವಿಚಾರವಾಗಿ ಬಿಜೆಪಿಯವರು ಚುನಾವಣೆ ನಂತರ ಹತಾಶರಾಗಿದ್ದಾರೆ .ಬಿಜೆಪಿ ಶಾಸಕರ ನಡುವೆಯೇ ಒಡನಾಟ ಇಲ್ಲ.ಅಧ್ಯಕ್ಷರಿಗೂ ಶಾಸಕರಿಗೂ ಹೊಂದಾಣಿಕೆ ಇಲ್ಲ.
 
ಮಾಜಿ ಸಿಎಂ ಗಳ ಜೋತೆಯೂ ಹೊಂದಾಣಿಕೆ ಇಲ್ಲ.ಹತಾಶೆ ಹೊಂದಿ‌ದ್ದಾರೆ .ನಮ್ಮ ಸರ್ಕಾರ ಅಚ್ಚುಕಟ್ಟಾಗಿ ಹೊಗ್ತಿದೆ.ಐದು ಗ್ಯಾರಂಟಿ ಗಳನ್ನ ನಮ್ನ ಸರ್ಕಾರ ಕೊಟ್ಟಿದೆ .ನಾಳೆ ಗೃಹಲಕ್ಷ್ಮೀ ಯೋಜನೆ ಜಾರಿಯಾಗಲಿದೆ.ಭ್ರಷ್ಟಾಚಾರ ರಹಿತವಾಗಿ ಆಡಳಿತ ವನ್ನ ನಮ್ಮ ಸರ್ಕಾರ ಕೊಡ್ತಿದೆ.ಇದರಿಂದಲೇ ಅವರು ಇಂತ ವದಂತಿಯನ್ನ ಮಾಡ್ತಿದ್ದಾರೆ ಎಂದು ಬಿ.ನಾಗೇಶ್ ಹೇಳಿದ್ದಾರೆ.
 
40%ಕಮೀಷನ್ ತನಿಖೆಗೆ ಆಯೋಗ ರಚಿಸಿದ್ದೀರಿ ,ಹಿಂದಿನ ಅಧಿಕಾರಿಗಳೇ ಇಗಲು ಮುಂದುವರೆದಿದ್ದಾರೆ ತನಿಖೆ ಪಾರದರ್ಶಕವಾಗಿ ಆಗುತ್ತಾ ..? ಎಂದು ಕ್ರೀಡಾ ಸಚಿವ ಬಿ ನಾಗ್ರೇಂದ್ರ ಹೇಳಿದ್ದಾರೆ.ಸಿಎಂ‌ ಪರಮಾಧಿಕಾರದಿಂದ ತನಿಕೆಗೆ ವಹಿಸಿದ್ದಾರೆ. ಹಿಂದಿನ ಸರ್ಕಾರದ ಅವ್ಯವಹಾರನ್ನ ಜನತೆಗೆ ನಾವು ತೋರಿಸಬೇಕಿದೆ.ನಾವು ಜನರಿಗೆ ಪ್ರಣಾಳಿಕೆಯಲ್ಲಿಯೇ ಹಗರಣ ಬಯಲಿಗೆಳೆಯುವ ಭರವಸೆ ಕೊಟ್ಟಿದ್ವಿ .ಸಿಎಂ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ.ಯಾರು ತಪ್ಪು ಮಾಡಿದ್ದಾರೋ ಅವರಮೇಲೆ ಕ್ರಮ ಕೈಗೊಳ್ತಾರೆ ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ