ನಮ್ಮ ಗ್ಯಾರಂಟಿಗಳು ಜನರಿಗೆ ತಲುಪುತ್ತಿದೆಯಾ ಇಲ್ಲವಾ ಎಂದು ಚರ್ಚೆ ಮಾಡಬೇಕು- ಡಿಕೆಶಿ

ಮಂಗಳವಾರ, 25 ಜುಲೈ 2023 (13:49 IST)
ಸಚಿವರ ವಿರುದ್ಧ ಶಾಸಕರು ಪತ್ರ ಬರೆದ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಯಾರು ಸಹ ಪತ್ರ ಬರೆದಿಲ್ಲ.. ಎಲ್ಲರೂ ಅವರವರ ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇದ್ದಾರೆ.ಗೆಲ್ಲಲಿ, ಸೋಲಲಿ ಅವರನ್ನು ಗಮನದಲ್ಲಿ ಇಡಬೇಕು ಎಂದು ಹೇಳಿದ್ದೇವೆ.ನಮ್ಮದು ಕೆಲ ಕಾರ್ಯಕ್ರಮಗಳಿವೆ.ಅಸೆಂಬ್ಲಿ ಇದ್ದ ಕಾರಣ ಚರ್ಚೆ ಮಾಡಲು ಆಗಿಲ್ಲ.ಅದರ ಬಗ್ಗೆ ಚರ್ಚೆ ಮಾಡಬೇಕು.ಭ್ರಷ್ಟಾಚಾರದ ಬಗ್ಗೆ ಕೆಲ ಕಡೆ ಬರ್ತಾ ಇದೆ.ಪ್ರಜಾಪ್ರತಿನಿಧಿಗಳನ್ನು ಮಾಡಿದ್ದೇವೆ.ಅದರ ಬಗ್ಗೆ ಹುಡುಗರಿಗೆ ಮಾಹಿತಿ ಕೊಡಬೇಕು.ನಮ್ಮ ಗ್ಯಾರಂಟಿಗಳು ಜನರಿಗೆ ತಲುಪುತ್ತಿದೆಯಾ ಇಲ್ಲವಾ ಎಂದು ಚರ್ಚೆ ಮಾಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಎಲ್ಲರೂ ಬಹಳ ಆಸೆಯಲ್ಲಿ ಇದ್ದಾರೆ.ಆ ಮಾತು ಕೊಟ್ಟಿದ್ದೇವೆ, ಈ ಮಾತು  ಕೋಟಿದ್ದೇವೆ ಎಂದಿದೆ.ನನ್ನ ಇಲಾಖೆಯಲ್ಲಿ ಹೋಲ್ಡ್ ಮಾಡಿ ಎಂದು ಹೇಳಿದ್ದೇನೆ.ಹತ್ತು, 100, 300 ಕೋಟಿ ಕೆಲಸ ಕೇಳ್ತಾ ಇದ್ದಾರೆ.ಸದ್ಯಕ್ಕೆ ಆಗಲ್ಲ ಹೋಲ್ಡ್ ಮಾಡಿ  ಎಂದು ಹೇಳಿದ್ದೇವೆ.ವರ್ಗಾವಣೆ ಸಮಯ ಮಿತಿ ಇದೆ.ಸಮಯ ಮಿತಿಯಲ್ಲಿ ಮಾಡಲಾಗಿದೆ.ಉಳಿದಿದ್ದು ಸಿಎಂಗೆ ಬಿಡಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ