ಸಿದ್ದರಾಮಯ್ಯ ಬಜೆಟ್ ಕರ್ನಾಟಕ ಮಾತ್ರವಲ್ಲ ಡಿಕೆಶಿ ಅವರಿಗೂ ನಿರಾಶೆಯಾಗಿದೆ- ವಿಜಯೇಂದ್ರ

ಶುಕ್ರವಾರ, 7 ಜುಲೈ 2023 (18:00 IST)
ವಿದಾನಸೌಧದಲ್ಲಿ ಮಾತನಾಡಿದ ಶಾಸಕ ವಿಜಯೇಂದ್ರ ಸಿದ್ದರಾಮಯ್ಯ ಅವರು ಮಂಡನೆ ಮಾಡ್ತಿರೋ 14ನೇ ಬಜೆಟ್ ಬಹಳ ನಿರೀಕ್ಷೆ ಇತ್ತು.ಸಿದ್ದರಾಮಯ್ಯ ಅವರು ಮಂಡಿಸಿರೋ ಬಜೆಟ್ ನಿರಾಶಾದಾಯಕ ಬಜೆಟ್ ಆಗಿದೆ.ನಿರಾಶೆ ಆಗಿರೋದು ಕರ್ನಾಟಕ ಮಾತ್ರವಲ್ಲ ಡಿಕೆಶಿ ಅವರಿಗೂ ನಿರಾಶೆ ಆಗಿದೆ.
 
ಡಿಕೆಶಿ ಅವರು ಚುನಾವಣೆ ಮೊದಲು ಪಾದಯಾತ್ರೆ ಮಾಡಿದ್ರು.ಮೇಕೇದಾಟಿಗೆ 3 ಸಾವಿರ, ಮಹದಾಯಿಗೆ 10 ಕೋಟಿ ಮೀಸಲು ಅಂತ ಹೇಳಿದ್ರು.ಆದ್ರೆ ಹಣ ಮೀಸಲಿಟ್ಟಿಲ್ಲ.ಸಿದ್ದರಾಮಯ್ಯ ಅವರು ಡಿಕೆಶಿ ಮೇಲೆ ಸೇಡು ತೀರಿಸಿಕೊಂಡಂತಿದೆ.ಸಿದ್ದರಾಮಯ್ಯ ಅವರು ಶ್ರಮ, ಬುದ್ದಿವಂತಿಕೆ ಎಲ್ಲಾ ವ್ಯರ್ಥ ಆಗಿದೆ.ಕೇಂದ್ರದ ಮೇಲೆ ಗೂಬೆ ಕೂರಿಸೋದು, ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಬೈಯ್ಯೋದು ಮಾಡಿದ್ದಾರೆ.
 
ಆಶಾ, ಅಂಗನವಾಡಿ ಕಾರ್ಯಯಕರ್ತೆಯರಿಗೆ ಹಣ ಮೀಸಲಿಟ್ಟಿಲ್ಲ.ಇಡೀ ಬಜೆಟ್ ಪೊಲಿಟಿಕಲ್ ಸ್ಟೇಟ್ಮೆಂಟ್ ಅಂದ್ರೆ ತಪ್ಪಾಗಲ್ಲ.ನಿಜವಾಗಲು ಇದು ದುರಾದೃಷ್ಟ.ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆ‌.ಬಿಜೆಪಿ ಆರ್ಥಿಕ ಶಿಸ್ತು ಕಾಪಾಡದಿದ್ರೆ ಇವತ್ತು ಕಷ್ಟ ಆಗ್ತಿತ್ತು.ಬಂಡವಾಳ ಹೂಡಿಕೆಯಲ್ಲೂ 9.8ಲಕ್ಷ ಕೋಟಿ MOU ಆಗಿದೆ.ಭ್ರಷ್ಟಾಚಾರ ಅಂತ ಆರೋಪಿಸಿ ಗೂಬೆ ಕೂರಿಸಿದ್ದಾರೆ.ಭ್ರಷ್ಟಾಚಾರ ನಡೆದಿದ್ರೆ GST ಹೆಚ್ಚಳವಾಗ್ತಿತ್ತಾ.?ಬಜೆಟ್ ಮಂಡನೆ ಮೂಲಕ, ಡಿಕೆಶಿ ಅವರಿಗೆ ಪಾಠ ಕಲಿಸಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಅಪಾದನೆ ಮಾಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ