ನಾಡಿದ್ದು ರಾಮನಗರದಲ್ಲಿ ಪಾದಯಾತ್ರೆ ಮಾಡುತ್ತಿದ್ದೆವೆ-ಡಿಸಿಎಂ ಡಿಕೆ ಶಿವಕುಮಾರ್

ಮಂಗಳವಾರ, 5 ಸೆಪ್ಟಂಬರ್ 2023 (16:23 IST)
ಭಾರತ ಜೋಡೋ ಯಾತ್ರೆ ಮುಗಿದು ಸಪ್ಟೆಂಬರ್ 7 ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ.ಭಾರತ ಜೋಡೋ ಯಾತ್ರೆಯ ನೆನಪಿಗಾಗಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಭಾರತ ಜೋಡೋ ಯಾತ್ರಾ ಮಾಡಲಿದ್ದೆವೆ.ನಾಡಿದ್ದು ರಾಮನಗರದಲ್ಲಿ ಪಾದಯಾತ್ರೆ ಮಾಡುತ್ತಿದ್ದೆವೆ ಈ ಭಾರತ ಜೋಡೋ ಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.ಬೆಂಗಳೂರಿನಲ್ಲಿ ಪಾದಯಾತ್ರೆ ಮಾಡಬೇಕಿತ್ತು ಆದರೆ ಅಲ್ಲಿ ಟ್ರಾಫಿಕ್ ಸಮಸ್ಯೆ ಉಂಡಾಗಲಿದೆ .ಹಾಗಾಗಿ ನಾನೇ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿ ರಾಮನಗರದಲ್ಲಿ ಭಾರತ ಜೋಡೋ ಯಾತ್ರಾ ಮಾಡುತ್ತಿದ್ದೆವೆ.ನಾಡಿದ್ದು ಕ್ಯಾಬಿನೆಟ್ ಸಭೆ ಕೂಡ ಇದೆ..ಕ್ಯಾಬಿನೆಟ್ ಸಭೆ ಮುಗಿದ ಬಳಿಕ ಸಚಿವರು ಭಾರತ ಜೋಡೋ ಯಾತ್ರಾ ಮಾಡಬಹುದು ಅಥವಾ ಸಪ್ಟೆಂಬರ್ 8 ರಂದು ಮಾಡಬಹುದು. ಸುಮಾರು ಒಂದು ಗಂಟೆಗಳ ವರೆಗೆ ಈ ಪಾದಯಾತ್ರೆ ನಡೆಯಲಿದೆ.ಭಾರತ ಜೋಡೋ ಯಾತ್ರ ಮಾಡಬೇಕು ಅಂತ ನಮಗೆ ಎಐಸಿಸಿ ಇಂದ ಸೂಚನೆ ಬಂದಿದೆ.
 
ಶೀಘ್ರದಲ್ಲೇ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡುತೇವೆ.15-20 ಜನ ಶಾಸಕರಿಗೆ ನಿಗಮ ಮಂಡಳಿಯ ಅಧ್ಯಕ್ಷರಾಗಿ ಮಾಡುತೇವೆ.ಉಳಿದ ಎಲ್ಲಾ ನಿಗಮ ಮಂಡಳಿಯನ್ನು ನಮ್ಮ ಕಾರ್ಯಕರ್ತರಿಗೆ ಕೋಡುತೇವೆ.ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಕನಕಪುರದಲ್ಲಿ ಮಾಡಬೇಕು ಅಂತ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೇ ನಿರ್ಧಾರ ಆಗಿತ್ತು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ