ಬೆಂಗಳೂರಿನಲ್ಲಿ ಬಿಬಿಎಂಪಿ ವತಿಯಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿದ್ದಾರೆ. ಈಗಾಗಲೇ ಗುರುತು ಮಾಡಿದ ಸ್ಥಳಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ. ಕಂದಾಯ ಇಲಾಖೆ ಜೊತೆಗೂ ಜಂಟಿಯಾಗಿ ಸರ್ವೇ ಮಾಡಬೇಕಿದೆ. ಹೀಗಾಗಿ ಇದಕ್ಕೆ ಕಾಲಾವಕಾಶ ಬೇಕು.. ನಾವು ಕಂದಾಯ ಇಲಾಖೆ ಜೊತೆ ಚರ್ಚೆ ಮಾಡಿದ್ದೇವೆ. ಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದವರ ಒತ್ತುವರಿ ಮರು ಸರ್ವೇ ಮಾಡ್ತೇವೆ. ಎಲ್ಲೂ ಕೂಡ ಒತ್ತುವರಿ ತೆರವು ಕಾರ್ಯಾಚರಣೆ ನಿಂತಿಲ್ಲ ಎಂದರು. ಬಫರ್ ಝೋನ್ ತೆರವು ಮಾಡೋದು ಸುಲಭದ ಮಾತಲ್ಲ. ಅದಕ್ಕಂತಲೇ ಒಂದಿಷ್ಟು ರೀತಿ ನಿಯಮಗಳಿವೆ, ಅದನ್ನು ಪಾಲಿಸಬೇಕು. ಯಾವಾಗ ಬಫರ್ ಝೋನ್ ನಿರ್ಮಾಣ ಆಯ್ತು ಅಂತೆಲ್ಲಾ ನೋಡಬೇಕು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸರ್ವೇ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.