ಬೆಂಗಳೂರು : ಕಸದಿಂದಲೇ ಕಾಸು ಎಂಬ ಚರ್ಚೆ ಮತ್ತೆ ಶುರುವಾಗಿದೆ. ಸ್ವಚ್ಛ ನಗರ ಪಟ್ಟಿಯಲ್ಲಿ ಬೆಂಗಳೂರು ಕೊನೆಯ ಸ್ಥಾನದಲ್ಲಿರುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಗಳದಲ್ಲಿ ಕಸದ ಟೆಂಡರ್ ಸದ್ದು ಮಾಡುತ್ತಿದೆ.
ಕಸದ ಮಾಫಿಯಾಕ್ಕೆ ಲಗಾಮು ಹಾಕಲು ಪಾಲಿಕೆ ದೊಡ್ಡ ಅಸ್ತ್ರ ಸಿದ್ಧಪಡಿಸಿದೆ.ಒಂದು ದಶಕಗಳ ಬಳಿಕ ಬಿಬಿಎಂಪಿ ಕಸ ಸಾಗಣಿಕೆಗೆ ಟೆಂಡರ್ ಕರೆದಿದೆ.
ವಿಚಿತ್ರವೆಂದರೆ ಟೆಂಡರ್ ವಿರುದ್ಧ ಅಸಮಾಧಾನದ ಕೂಗು ಶುರುವಾಗಿದೆ. ಕಸದ ಟೆಂಡರ್ ಷರತ್ತು ಹೊರ ಬೀಳುವ ಮುನ್ನವೇ ವಿರೋಧ ಶುರುವಾಗಿದ್ದು, ಗುತ್ತಿಗೆದಾರರಿಗೆ ಕಸದ ಷರತ್ತುಗಳು ಕಬ್ಬಿಣದ ಕಡಲೆಯಂತಾಗಿದೆ.