ಪಾಲಕ್ಕಾಡು ಜಿಲ್ಲೆಯ ಕಣ್ಣನ್ನೂರು ಎಂಬಲ್ಲಿ ಗೋಣಿಚೀಲವೊಂದರಲ್ಲಿ ಶಸ್ತ್ರಾಸ್ತ್ರಗಳನ್ನು ಎಸೆದು ಹೋಗಿರುವುದು ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾಲಕ್ಕಾಡು ಎಲಪಲ್ಲಿಯಲ್ಲಿ ಇತ್ತೀಚೆಗೆ ಆರ್ಎಸ್ಎಸ್ ಮಂಡಲ ಬೌದ್ಧಿಕ್ ಪ್ರಮುಖ್ ಆಗಿದ್ದ ಸಂಜಿತ್ರನ್ನು ಕೊಲೆಗೈದ ಪಾತಕಿಗಳು ಶಸ್ತ್ರಾಸ್ತ್ರಗಳನ್ನು ಎಸೆದು ಪರಾರಿಯಾಗಿರಬಹುದೆಂದು ಸಂಶಯಿಸಲಾಗಿದೆ.
ನಾಲ್ಕು ಸರಳುಗಳಲ್ಲಿ ಎರಡು ತುಕ್ಕು ಹಿಡಿದಿರುವುದು ಕಂಡು ಬಂದಿದೆ. ಆದರೆ ಒಂದು ಬಹುಮಟ್ಟಿಗೆ ಹೊಸದು. ರಕ್ತದ ಕಲೆಗಳು ಅಥವಾ ಇತರ ಚಿಹ್ನೆಗಳು ಸ್ಪಷ್ಟವಾಗಿಲ್ಲ. ವೈಜ್ಞಾನಿಕ ಪರೀಕ್ಷೆಯ ನಂತರವಷ್ಟೇ ಎಲಪಲ್ಲಿಯಲ್ಲಿ ನಡೆದ ಕೊಲೆಗೂ ಈ ಆಯುಧಗಳಿಗೂ ಸಂಬಂಧವಿದೆಯೇ ಎಂಬುದು ಖಚಿತವಾಗಲಿದೆ ಎಂದು ಸಿಐ ತಿಳಿಸಿದ್ದಾರೆ. ಇದೇ ವೇಳೆ ಸಂಜಿತ್ ರನ್ನು ಕೊಲೆಗೈದು ಎರಡು ದಿನಗಳು ಕಳೆದರೂ ಹಂತಕರನ್ನು ಪತ್ತೆಹಚ್ಚುವಲ್ಲಿ ಹಾಗೂ ಯಾವುದೇ ಸಾಕ್ಷ್ಯವನ್ನು ಹುಡುಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಬಿಜೆಪಿ ಪಾಲಕ್ಕಾಡು ಮಂಡಲ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ.