ವೀಕೆಂಡ್ ಕರ್ಫೂ ವೇಳೆ ಅನಗತ್ಯವಾಗಿ ಹೋರಾಡಿದರೆ ಕ್ರಮ ತೆಗೆದುಕೊಳ್ಳದಿದ್ದರೆ ಎಂದು ಕಮಿಷನರ್ ಕಮಲ್ ಪಂಥ್ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ 8 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಕಂಪನಿ, ಕಚೇರಿಗಳಿಗೆ ಹೋಗುವವರು ಐಡಿ ಕಾರ್ಡ್ ಇಟ್ಟುಕೊಂಡು ಹೋಗಬೇಕು. ಇನ್ನೂ ಪ್ರಯಾಣಿಕರು ಟಿಕೆಟ್ ತೋರಿಸಿದ್ದಾರೆ ಎಂದು ಹೇಳಿದರು. ವೀಕೆಂಡ್ ಕರ್ಫ್ಯೂನಲ್ಲಿ ಅನಗತ್ಯವಾಗಿ ಹೊರಬಂದರೆ ಅರೆಸ್ಟ್ ಮಾಡಿ ಕೇಸ್ ದಾಖಲಿಸುತ್ತೇನೆ. ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡಬೇಕು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.