ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಸ್ವಾಗತ
ಶನಿವಾರ, 14 ಜುಲೈ 2018 (19:15 IST)
ತುಮಕೂರು ಜಿಲ್ಲೆ ವಿಶ್ವ ಭೂಪಟದಲ್ಲಿ ಸೇರುವ ಕಾಲ ಹತ್ತಿರವಾಗಿದೆ. 40 ವರ್ಷಗಳ ಇತಿಹಾಸ ಹೊಂದಿದ್ದ ಹಿಂದೂಸ್ತಾನ್ ಮಷೀನ್ ಟೂಲ್ಸ್(ಎಚ್ಎಂಟಿ) ಕೈಗಡಿಯಾರ ಕಂಪನಿ ಗೆತುಮಕೂರು ಜಿಲ್ಲೆಯ ಜನತೆ ಭಾವಪೂರ್ಣ ವಿದಾಯ ಹೇಳಿ, ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋ ಕಂಪನಿಗೆ ಹೃದಯಸ್ಪರ್ಶಿ ಸ್ವಾಗತ ಕೋರಿದರು.
ರಾಜಧಾನಿ ಬೆಂಗಳೂರಿಗೆ ಅವಳಿ ನಗರದಂತೆ ಬೆಳೆಯುತ್ತಿರುವ ತುಮಕೂರು ನಗರದಲ್ಲಿ ದೊಡ್ಡ ದೊಡ್ಡ ಕೈಗಾರಿಕೆ ಗಳ ತಲೆ ಎತ್ತುತ್ತಿವೆ. ಫುಡ್ ಪಾರ್ಕ್, ಹೆಚ್ ಎ ಎಲ್ ನಂತಹ ಬೃಹತ್ಕೈಗಾರಿಕೆಗಳ ಜೊತೆಗೆ ಅಂತರಾಷ್ಟ್ರೀಯ ಬಾಹ್ಯಕಾಶ ಸಂಸ್ಥೆ ( ಇಸ್ರೋ) ತುಮಕೂರಿನಲ್ಲಿ ಸ್ಥಾಪನೆಯಾಗಲಿದೆ. ಈ ಮೂಲಕ ತುಮಕೂರು ಜಿಲ್ಲೆ ವಿಶ್ವಮಟ್ಟದಲ್ಲಿ ಗಮನ ಸೆಳೆಯಲಿದೆ.
40 ವರ್ಷಗಳ ಇತಿಹಾಸ ಹೊಂದಿರುವ ಹೆಚ್ ಎಂ ಟಿ ಜಾಗದಲ್ಲಿ ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋ ತಲೆ ಎತ್ತಲಿದೆ. ಇದು ಜಿಲ್ಲೆಯ ಜನತೆಗೆ ಸಂತೊಷವನ್ನುಂಟು ಮಾಡಿದೆ.ಎಚ್ಎಂಟಿ ಕಾರ್ಖಾನೆಗೆ ಸೇರಿದ 109 ಎಕರೆ ಭೂಮಿಯನ್ನ 1194 ಕೋಟಿಗೆ ರೂ ಗಳಿಗೆ ಇಸ್ರೋ ಸಂಸ್ಥೆ ಖರೀದಿ ಮಾಡಿದೆ. ಎಚ್ ಎಂ ಟಿ ಆವರಣದಲ್ಲಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹಾಗೂ ಕೈಗಾರಿಕೆ ಸಚಿವ ಶ್ರೀನಿವಾಸ್, ಕಾರ್ಮಿಕ ಸಚಿವ ವೆಂಕಟರಮಣಪ್ಪ , ಸಂಸದ ಮುದ್ದಹನುಮೇಗೌಡ, ಇಸ್ರೋ ಅಧಿಕಾರಿ ಕುಮಾರಸ್ವಾಮಿ ಅವರಿಗೆ ಭೂಮಿಯನ್ನಹಸ್ತಾಂತರಿಸಿದ್ರು. ಇನ್ಮುಂದೆ ದೇಶದ ಪ್ರತಿಷ್ಟಿತ ಸಂಸ್ಥೆಯಾಗಿರೋ ಇಸ್ರೋ ಮಾಲಿಕತ್ವಕ್ಕೆ ಒಳಪಡಲಿದೆ.