ನಟಿ ಸಂಜನಾ ತಮ್ಮ ಟ್ವೀಟರ್ ನಲ್ಲಿ ಹ್ಯಾರಿಸ್ ಅವರ ಕುರಿತು ಹೇಳಿದ್ದೇನು ಗೊತ್ತಾ...?

ಶುಕ್ರವಾರ, 23 ಫೆಬ್ರವರಿ 2018 (06:44 IST)
ಬೆಂಗಳೂರು : ಇತ್ತಿಚೆಗೆ ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌ ಅವರು ವಿದ್ವತ್ ಮೇಲೆ ಹಲ್ಲೆ ಮಾಡಿ ಜೈಲು ಸೇರಿರುವ ಹಿನ್ನಲೆಯಲ್ಲಿ ಇದೀಗ ಸ್ಯಾಂಡಲ್ ವುಡ್ ನಟಿಯೊಬ್ಬರು  ಹ್ಯಾರಿಸ್ ಅವರ ಮೇಲೆ ಅನುಕಂಪ ತೋರಿ ಟ್ವೀಟ್‌ ಮಾಡಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾರಿಸ್‌ ಹಾಗೂ ಪುತ್ರನ ಕುರಿತು ಆರೋಪಗಳೇ ಕೇಳಿಬರುತ್ತಿರುವಾಗ  ಸ್ಯಾಂಡಲ್ ವುಡ್ ನಟಿ ಸಂಜನಾ ಗರ್ಲಾನಿ ಅವರು ಮಾತ್ರ ಹ್ಯಾರಿಸ್ ಪರವಾಗಿ ಟ್ವೀಟ್‌ ಮಾಡಿದ್ದು ಬಾರಿ ಚರ್ಚೆಗೆ ಕಾರಣವಾಗಿದೆ. ಅವರು ತಮ್ಮಟ್ವೀಟರ್ ನಲ್ಲಿ ಹ್ಯಾರಿಸ್ ಅವರ ಕುರಿತು,’ಹ್ಯಾರಿಸ್ ಒಬ್ಬ ಉತ್ತಮ ನಾಯಕ ಅವರದ್ದೇನೂ ತಪ್ಪಿಲ್ಲದೆ ಮಗ ಮಾಡಿರುವ ತಪ್ಪಿಗೆ ಬೆಲೆ ತೆರಬೇಕಾಗಿ ಬಂದಿರುವುದಕ್ಕೆ ಅನುಕಂಪವಿದೆ. ಎರಡು ದಶಕಗಳಿಂದ ಉತ್ತಮ ಶಾಸಕರಾಗಿರುವ ಹ್ಯಾರಿಸ್‌ ಅವರಿಗೆ ಹೀಗಾಗಬಾರದಿತ್ತು’ ಎಂದು ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ