ಮಗಳಿಗೆ ತಡರಾತ್ರಿ ಅಪ್ಪ ಮಾಡಿದ್ದೇನು? ಶಾಕಿಂಗ್

ಭಾನುವಾರ, 4 ಆಗಸ್ಟ್ 2019 (18:41 IST)
ಹೆತ್ತ ತಂದೆಯೇ ತಡರಾತ್ರಿ ಮಗಳ ರೂಮಿಗೆ ನುಗ್ಗಿ ಮಾಡಬಾರದ ಕೆಟ್ಟ ಕೆಲಸ ಮಾಡಿದ್ದಾನೆ.

ಮಲಗಿದ್ದ ಮಗಳನ್ನು ಹೆತ್ತ ತಂದೆಯೇ ಕೊಲೆ ಮಾಡಿರೋ ಘಟನೆ ನಡೆದಿದೆ. ಈ ಘಟನೆ ಹರಿಯಾಣದ ಗಡಿ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ.

ಅಂತರ್ಜಾತಿ ವಿವಾಹ ಆಗೋದಾಗಿ ಅಪ್ಪನಿಗೆ ಮಗಳು ಹೇಳಿದ್ದಾಳೆ. ಇದರಿಂದ ಕೆರಳಿದ್ದ ತಂದೆ, ಮಗಳನ್ನು ಕೊಲೆ ಮಾಡಿದ್ದಾನೆ.

ತಡರಾತ್ರಿ ಮಗಳು ಮಲಗಿದ್ದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆದರೆ ಅಂತ್ಯಸಂಸ್ಕಾರ ನಡೆದ ಬಳಿಕ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ