ಉದ್ಯೋಗ ಸಿಗದೆ ಒದ್ದಾಡುತ್ತಿರುವವರು ಸರಸ್ವತಿ ದೇವಿಗೆ ಇದನ್ನು ಅರ್ಪಿಸಿ

ಶುಕ್ರವಾರ, 19 ಜುಲೈ 2019 (06:57 IST)
ಬೆಂಗಳೂರು : ಜೀವನ ಸಾಗಿಸಲು ಪ್ರತಿಯೊಬ್ಬರಿಗೂ ಹಣ ತುಂಬಾ ಮುಖ್ಯ. ಹಣ  ಸಂಪಾದಿಸಲು ಪ್ರತಿಯೊಬ್ಬರು ಕಷ್ಟಪಟ್ಟು ದುಡಿಯಬೇಕು. ಅದಕ್ಕಾಗಿ ಒಂದು ಕೆಲಸಬೇಕು. ಜೀವನದಲ್ಲಿ  ಕೆಲಸ ಸಿಗದಿದ್ದಾಗ ಜನರು ಜಿಗುಪ್ಸೆಗೆ ಒಳಗಾಗುತ್ತಾರೆ. ಅಂತವರು ತಮಗೆ ಒಳ್ಳೆಯ ಕೆಲಸ ದೊರಕಬೇಕೆಂದರೆ ಈ ಒಂದು ಪರಿಹಾರ ಮಾಡಿ.




ತಂದೆತಾಯಿ ತಾವು ಕಷ್ಟಪಟ್ಟು ದುಡಿದು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಾರೆ. ಕಾರಣ ಮುಂದೆ ಅವರು ಒಳ್ಳೆಯ ಕೆಲಸಕ್ಕೆ ಸೇರಿ ಉತ್ತಮ ಜೀವನ ಸಾಗಿಸಲಿ ಎಂದು. ಆದರೆ ಮಕ್ಕಳು ಕಷ್ಟಪಟ್ಟು ಓದಿ ಉದ್ಯೋಗ ಹುಡುಕಿದರೂ ಅದು ಸಿಗದಿದ್ದಾಗ ಮಕ್ಕಳ ಜೊತೆಗೆ ತಂದೆತಾಯಿಗಳಿ ಚಿಂತೆಗೊಳಗಾಗುತ್ತಾರೆ. ಆದಕಾರಣ ಜೀವನದಲ್ಲಿ ಒಳ್ಳೆಯ ಉದ್ಯೋಗ ಪಡೆಯಬೇಕೆಂದರೆ ಸರಸ್ವತಿ ದೇವಿಗೆ ಈ ಇವುಗಳನ್ನು ಅರ್ಪಿಸಿ.


ಕೃತಿಕಾ ನಕ್ಷತ್ರ ಹಾಗೂ ಭಾನುವಾರ ಒಂದೆ ದಿನ ಬಂದಾಗ ನೀವು ಮುಂಜಾನೆ ಪ್ರಾತಃಕಾಲದಲ್ಲಿ ಎದ್ದು, ಸ್ನಾನ ಮಾಡಿ ಮೊದಲು ತಂದೆತಾಯಿಗೆ ನಮಸ್ಕರಿಸಿ. ಬಳಿಕ ಯಾವುದಾದರೂ ಸರಸ್ವತಿ ದೇವಿಯ ಮಂದಿರಕ್ಕೆ ಬಿಳಿ ಬಟ್ಟೆಯನ್ನು ಧರಿಸಿ ಹೋಗಿ ಅಲ್ಲಿ ದೇವಿಗೆ ಬಿಳಿ ಬಣ್ಣದ ಹೂಗಳಿಂದ ಪೂಜಿಸಿ, ಅವಲಕ್ಕಿಯನ್ನು ಪಂಚಕಜ್ಜಾಯವಾಗಿ ನೀಡಬೇಕು. ಹಾಗೇ ಅಲ್ಲಿರುವ ಮಕ್ಕಳಿಗೆ ಹಣ್ಣುಗಳನ್ನು ನೀಡಬೇಕು. ಇದರಿಂದ ನೀವು ಇಷ್ಟಪಡುವಂತಹ ಉದ್ಯೋಗ ನಿಮಗೆ ಸಿಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ