ದೊಡ್ಡಕೆರೆ ಬಯಲಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಆ ಕೆಲಸ ಮಾಡಿದ್ದಾರೆ.
ಮಂಡ್ಯದ ನೆರೆ ಪೀಡಿತ ಹೊಸಹೊಳಲು ದೊಡ್ಡಕೆರೆ ಬಯಲಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಭೇಟಿ ನೀಡಿದ್ರು.
ಸಂತ್ರಸ್ತರಿಗೆ ಬೆಳೆ ಪರಿಹಾರ ಸೇರಿದಂತೆ ಪ್ರಾಕೃತಿಕ ವಿಕೋಪ ನಿಧಿಯ ಅಡಿಯಲ್ಲಿ ಪರಿಹಾರ ವಿತರಣೆ ಮಾಡಲಾಗುವುದು. ಹೀಗಂತ ಜಿಲ್ಲಾಧಿಕಾರಿ ವೆಂಕಟೇಶ್ ಭರವಸೆ ನೀಡಿದರು.
ಸಂತ್ರಸ್ತರ ನೋವಿಗೆ ಸ್ಪಂದಿಸಿ ಪರಿಹಾರ ದೊರಕಿಸಿಕೊಡಲು ಜಿಲ್ಲಾಡಳಿತ ಬದ್ಧವಾಗಿದೆ.
ಎನ್.ಡಿ.ಆರ್.ಎಫ್ ಪ್ರಾಕೃತಿಕ ವಿಕೋಪ ನಿಧಿಯಲ್ಲಿ ಭಾರೀ ಮಳೆಯಿಂದ ಮನೆಯ ಗೋಡೆಬಿದ್ದು
ನಿಧನರಾದ ದಲಿತ ಮುಖಂಡ ಕುಮಾರ್ ಅವರ ತಾಯಿ ನರಸಮ್ಮ ಅವರಿಗೆ 5 ಲಕ್ಷ ರೂ.ಗಳ ಪರಿಹಾರ ಧನದ ಚೆಕ್ ವಿತರಿಸಿದ್ರು.
ಈಗಾಗಲೇ ಬೆಳೆನಷ್ಟ ಮತ್ತು ಕೃಷಿ ಭೂಮಿಯು ಕೊರಕಲು ಬಿದ್ದು ಹಾಳಾಗಿರುವುದನ್ನು ಕೃಷಿ, ತೋಟಗಾರಿಕೆ
ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರೆ. ನಷ್ಟದ ಅಂದಾಜು ಮಾಡಿದ್ದಾರೆ ಎಂದು ಡಿಸಿ ತಿಳಿಸಿದ್ರು.