ಅನಿಲ್ ಲಾಡ್ ಬಗ್ಗೆ ಸಂತೋಷ ಲಾಡ್ ಹೇಳಿದ್ದೇನು?

ಬುಧವಾರ, 20 ಡಿಸೆಂಬರ್ 2017 (12:38 IST)
ಶಾಸಕ ಅನಿಲ್ ಲಾಡ್ ಅವರಿಗಿರುವ ಅಸಮಾಧಾನವನ್ನು ಅವರೇ ಬಗೆಹರಿಸಿಕೊಳ್ಳಬೇಕು ಎಂದು ಸಹೋದರ ಹಾಗೂ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ಮುಂಬರುವ ಚುನಾವಣೆಗೆ ಟಿಕೆಟ್ ಹಾಗೂ ಅಕ್ರಮ ಗಣಿಗಾರಿಕೆ ಕುರಿತು ಎಸ್‍ಐಟಿ ಪ್ರಕರಣ ದಾಖಲಿಸಿರುವ ಬಗ್ಗೆ ಅನಿಲ್ ಲಾಡ್ ಅವರು ಅಸಮಾಧಾನ ವ್ಯಕ್ತಪಡಿಸಿ, ಇದಕ್ಕೆ ನಮ್ಮ ಪಕ್ಷದವರೆ ಕಾರಣ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅನಿಲ್ ಲಾಡ್ ಅವರಿಗೆ ಅಸಮಾಧಾನ ಏಕೆ ಎಂಬುದು ಅವರಿಂದಲೇ ತಿಳಿದುಕೊಳ್ಳಬೇಕು ಎಂದಿದ್ದಾರೆ.
 
ಅನಿಲ್ ಲಾಡ್‌ ಅವರ ಅಸಮಾಧಾನವನ್ನು ನಾನು ಬಗೆಹರಿಸಲು ಆಗುವುದಿಲ್ಲ. ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್‌ ಜೊತೆ ನೇರವಾಗಿ ಸಂಪರ್ಕ ಹೊಂದಿರುವ ಅವರು ಅಸಮಾಧಾನ ಏನೇ ಇದ್ದರೂ ಅವರ ಬಳಿ ನೇರವಾಗಿ ಮಾತನಾಡಿದರೆ ಬಗೆಹರಿಯಬಹುದು ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ