ತನ್ನನ್ನು ಬಿಟ್ಟು ಇನ್ನೊಬ್ಬನ ಜತೆ ಹೊರಟವಳಿಗೆ ಗೆಳೆಯನೊಬ್ಬ ಮಾಡಿದ್ದೇನು?
ಶನಿವಾರ, 6 ಫೆಬ್ರವರಿ 2021 (10:49 IST)
ಮುಂಬೈ : 36 ವರ್ಷದ ವ್ಯಕ್ತಿಯೊಬ್ಬ ತಾನು ಸಂಬಂಧ ಇಟ್ಟುಕೊಂಡಿದ್ದ 40 ವರ್ಷದ ಮಹಿಳೆಯ ತೋಳುಗಳನ್ನು ಕತ್ತರಿಸಿದ ಘಟನೆ ಮುಂಬೈನ ಒಶಿವಾರಾ ಪ್ರದೇಶದಲ್ಲಿ ನಡೆದಿದೆ.
ಆರೋಪಿ ಹಾಗೂ ಸಂತ್ರಸ್ತೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದರು. ಆದರೆ ಸಂತ್ರಸ್ತೆಗೆ ವ್ಯಕ್ತಿಯೊಬ್ಬನಿಂದ ಕರೆ ಬರುತ್ತಿದ್ದ ಹಿನ್ನಲೆಯಲ್ಲಿ ಆರೋಪಿಗೆ ಆಕೆಯ ಮೇಲೆ ಅನುಮಾನ ಶುರುವಾಗಿದೆ. ಆಕೆ ಆ ವ್ಯಕ್ತಿಯನ್ನು ಭೇಟಿ ಮಾಡಲು ಹೊರಟಾಗ ಅವಳನ್ನು ಫಾಲೋ ಮಾಡಿ ಬ್ಲೇಡ್ ನಿಂದ ಅವಳ ತೋಳನ್ನು ಕತ್ತರಿಸಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.