ಪಾದರಾಯನಪುರದಲ್ಲಿ ನಡೆದ ಘಟನೆಯ ಬಗ್ಗೆ ಶಾಸಕ ಜಮೀರ್ ಅಹಮ್ಮದ್ ಹೇಳಿದ್ದೇನು?

ಸೋಮವಾರ, 20 ಏಪ್ರಿಲ್ 2020 (09:43 IST)

ಬೆಂಗಳೂರು : ಪಾದರಾಯನಪುರದಲ್ಲಿ ಪೊಲೀಸ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಸ್ಥಳೀಯ ಶಾಸಕ ಜಮೀರ್ ಅಹಮ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.
 


 

ಕೊರೊನಾ ಪೀಡಿತ ಪ್ರದೇಶವಾದ ಪಾದರಾಯನಪುರದಲ್ಲಿ ಕೊರೊನಾ ಶಂಕಿತರನ್ನು ಕ್ವಾರಂಟೈನ್ ಗೆ ಕರೆದೊಯ್ಯುವಾಗ ಸ್ಥಳೀಯ ಶಾಸಕ ಜಮೀರ್ ಅಹಮ್ಮದ್ ಬಂದು ಹೇಳಿದ ಬಳಿಕವೇ ಬರುವುದಾಗಿ ತಿಳಿಸಿದ್ದಾರೆ. ಆದರೆ ಪೊಲೀಸ್ ಹಾಗೂ ಆರೋಗ್ಯ ಸಿಬ್ಬಂದಿಗಳ ಬಲವಂತ ಮಾಡಿದಾಗ ಅವರ ಮೇಲೆ ಪುಂಡರ ಗುಂಪು ಹಲ್ಲೆ ನಡೆಸಿದೆ.

 

ಈ ಬಗ್ಗೆ ಟ್ವೀಟರ್ ಇಂಗ್ಲೀಷ್ ನಲ್ಲಿ ಟ್ವೀಟ್  ಮಾಡಿದ  ಶಾಸಕ ಜಮೀರ್ ಅಹಮ್ಮದ್, ನಿನ್ನೆ ಪಾದರಾಯನಪುರ ಬಡಾವಣೆಯಲ್ಲಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಸ್ಥಳೀಯ ನಿವಾಸಿಗಳು ಹಲ್ಲೆಗೆ ಯತ್ನಿಸಿರುವುದು ದುಃಖಕರ. ಸರ್ಕಾರ, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿರುವುದು ನಿಮ್ಮ ಕ್ಷೇಮಕ್ಕಾಗಿ. ಅವರೊಂದಿಗೆ ಸಹಕರಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು.

 

 ಆದರೆ ಇದೀಗ ಟ್ವೀಟ್ ಮಾಡಿದ ಅವರು , ಈ ಘಟನೆ  ರಾಜಕೀಯ ಪಿತೂರಿ, ಇದು ನನ್ನ ಹೆಸರು ಕೆಡಿಸಲು ನಡೆಸಿರುವ ತಂತ್ರ, ಈ ಬಗ್ಗೆ ನಾನು ಮಾಹಿತಿ ಕಲೆ ಹಾಕುತ್ತಿದ್ದೇನೆ, ಈ ಬಗ್ಗೆ ಸರ್ಕಾರಕ್ಕೆ ನಾನು ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ