ಗುಂಡ್ಲುಪೇಟೆಯ ಬಿಜೆಪಿ ಕಛೇರಿಯಲ್ಲಿ ಶಾಸಕ ನಿರಂಜನ್ ಕುಮಾರ್ ಹೇಳಿದ್ದೇನು?

ಸೋಮವಾರ, 12 ನವೆಂಬರ್ 2018 (15:27 IST)
ಕೇಂದ್ರ ಸಚಿವ ಅನಂತ್ ಕುಮಾರ್ ನಮ್ಮನೆಲ್ಲ ಬಿಟ್ಟು ಅಗಲಿದ್ದಾರೆ. ನಮ್ಮ ಪಕ್ಷಕ್ಕೆ ಹಾಗೂ ರಾಜ್ಯ ಮತ್ತು ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಹೀಗಂತ ಶಾಸಕ ನಿರಂಜನ್ ಹೇಳಿದ್ದಾರೆ.

ಗುಂಡ್ಲುಪೇಟೆಯ ಬಿಜೆಪಿ ಕಚೇರಿಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ  ಯುವಕರನ್ನು ಸಂಘಟನೆ ಮಾಡಿ, ದೇಶಕ್ಕೆ ಮಾದರಿಯಾದಂತಹ ರಾಜಕಾರಣಿಯಾಗಿದ್ದರು. ರಾಜ್ಯದಲ್ಲಿ ಮಂತ್ರಿಯಾಗಿದ್ದಾಗ ಚಾಲೆಂಜಿಂಗ್ ಆಗಿ ಕೆಲಸ ನಿರ್ವಹಿಸಿದ್ದಂತಹ ಧೀಮಂತ ನಾಯಕ ಅನಂತ್ ಕುಮಾರ್ ಅವರಾಗಿದ್ದಾರೆ.

ಅನಂತ್ ಕುಮಾರ್ ಅಗಲಿಕೆ ಇಡೀ ದೇಶಕ್ಕೆ ತುಂಬಲಾರದ ನೋವುಂಟುಮಾಡಿದೆ ಎಂದು ಗುಂಡ್ಲುಪೇಟೆಯಲ್ಲಿ ಬಿಜೆಪಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಸಂತಾಪ ಸೂಚಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ