ಶಬರಿಮಲೆ ವಿವಾದ ಹಾಗೂ ಟಿಪ್ಪು ಜಯಂತಿ ಆಚರಣೆ ಬಗ್ಗೆ ರಾಜಮಾತೆ ಪ್ರಮೋದಾ ದೇವಿ ಹೇಳಿದ್ದೇನು?
ಬುಧವಾರ, 14 ನವೆಂಬರ್ 2018 (15:42 IST)
ಬೆಳಗಾವಿ :ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ಕುರಿತು ಬಾರೀ ವಿರೋಧ ವ್ಯಕ್ತವಾಗುತ್ತಿದ್ದು, ಇದೀಗ ಈ ಬಗ್ಗೆ ರಾಜಮಾತೆ ಪ್ರಮೋದಾ ದೇವಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ನಂಬಿಕೆಯ ವಿಚಾರವು ಇದಾಗಿದ್ದು, ನಮ್ಮಲ್ಲಿ ಮನೆಯ ಪದ್ದತಿಯನ್ನು ಅನುಸರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೀಗಾಗಿ ಶಬರಿಮಲೆಗೆ ಹೋಗಬೇಕೋ ಬೇಡವೋ ಎನ್ನುವುದು ಅವರವರ ಭಾವಕ್ಕೆ ಬಿಟ್ಟಿದ್ದು. ಆದರೆ ಮಹಿಳೆಯರು ಹೋಗಬೇಕು ಎನ್ನುವುದರಲ್ಲಿ ತಪ್ಪಿಲ್ಲ. ಕಾನೂನು ಪ್ರಕಾರ ಎಲ್ಲರಿಗೂ ಹಕ್ಕು ಇದೆ ಎಂದು ಹೇಳಿದ್ದಾರೆ.
ಇನ್ನು ಟಿಪ್ಪು ಜಯಂತಿ ಆಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪು ಸುಲ್ತಾನ್ ನಮ್ಮ ಕುಟುಂಬಕ್ಕೆ ಬಹಳ ತೊಂದರೆ ಕೊಟ್ಟಿದ್ದಾರೆ. ಟಿಪ್ಪು ಜಯತಿ ಬಗ್ಗೆ ಮಾತನಾಡುವ ಆಸಕ್ತಿ ನಮಗಿಲ್ಲ. ಒಂದು ಕುಟುಂಬಕ್ಕೆ ತೊಂದರೆ ಆದರೇನಂತೆ ಎಂದು ಸರ್ಕಾರ ನೋಡುತ್ತಿರಬಹುದು. ಯಾವ ಆಧಾರದ ಮೇಲೆ ಜಯಂತಿ ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಕಾರ್ಯಕ್ರಮವನ್ನು ವೈಯಕ್ತಿವಾಗಿ ನಾನು ಬೆಂಬಲಿಸಲ್ಲ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.