ನೆಕ್ರೋಫಿಲಿಯಾ ಬಗ್ಗೆ ಹೈಕೋರ್ಟ್ ಹೇಳಿದ್ದೇನು?

ಮಂಗಳವಾರ, 6 ಜೂನ್ 2023 (09:41 IST)
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಶವಾಗಾರಗಳಲ್ಲಿ ದೇಹಗಳ ಕಾವಲಿಗೆ ನಿಯೋಜಿತವಾಗಿರುವ ಅಟೆಂಡರ್ಗಳು ದೇಹಗಳೊಂದಿಗೆ “ಲೈಂಗಿಕ ಸಂಭೋಗ” ದಲ್ಲಿ ತೊಡಗುತ್ತಾರೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಐಪಿಸಿ ಸೆಕ್ಷನ್ 377ಗೆ ತಿದ್ದುಪಡಿ ತಂದು ಅದರಲ್ಲಿ ಮೃತದೇಹದ ಮೇಲಿನ ಅತ್ಯಾಚಾರ ಹಾಗೂ ವಿಕೃತಿಯನ್ನು ಕೂಡ ಸೇರಿಸಬೇಕು. ನೆಕ್ರೋಫಿಲಿಯಾ ಅಥವಾ ಸ್ಯಾಡಿಸಂ ಎಂಬ ಪ್ರತ್ಯೇಕ ನಿಬಂಧನೆಯನ್ನು ಪರಿಚಯಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಯುನೈಟೆಡ್ ಕಿಂಗ್ಡಂ, ಕೆನಡಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳು ನೆಕ್ರೋಫಿಲಿಯಾವನ್ನು ಅಪರಾಧವೆಂದು ಪರಿಗಣಿಸುವ ನಿರ್ದಿಷ್ಟ ಕಾನೂನುಗಳನ್ನು ಹೊಂದಿವೆ ಎಂದು ನ್ಯಾಯಾಲಯವು ತಿಳಿಸಿದೆ.

ಭಾರತದಲ್ಲಿ, ಮೃತ ಮಹಿಳೆಯರ ದೇಹಗಳ ಘನತೆ ಮತ್ತು ಹಕ್ಕುಗಳ ವಿರುದ್ಧದ ಅಪರಾಧಗಳನ್ನು ಪರಿಹರಿಸಲು ಮತ್ತು ತಡೆಗಟ್ಟಲು ಐಪಿಸಿ ಸೇರಿದಂತೆ ಯಾವುದೇ ಮೀಸಲಾದ ಶಾಸನವಿಲ್ಲ. ಮೃತರ ಘನತೆ ಕಾಪಾಡಲು ಕಾನೂನು ಕ್ರಮಗಳ ಅಗತ್ಯವನ್ನು ನ್ಯಾಯಾಲಯ ಒತ್ತಿ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ