ಅಯೋಧ್ಯೆ ತೀರ್ಪಿನ ಬಗ್ಗೆ ಸುನ್ನಿ ವಕ್ಫ್ ಮಂಡಳಿ ಹೇಳಿದ್ದೇನು?

ಸೋಮವಾರ, 21 ಅಕ್ಟೋಬರ್ 2019 (18:39 IST)
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ವಿವಾದದ ಕುರಿತಾದ ಪ್ರಕರಣದ ತೀರ್ಪಿಗೆ ಕ್ಷಣಗಣನೆ ಶುರುವಾಗಿದೆ.

ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸುನ್ನಿ ವಕ್ಫ್ ಮಂಡಳಿಯು ತೀರ್ಪು ಸಂವಿಧಾನದ ಆದರ್ಶ, ಮೌಲ್ಯಗಳನ್ನು ಎತ್ತಿಹಿಡಿಯುವಂತೆ ಆಗಬೇಕು ಎಂದು ಅಭಿಪ್ರಾಯಪಟ್ಟಿದೆ.

ಮುಂಬರುವ ಪೀಳಿಗೆಗೆ ಮಾರ್ಗದರ್ಶನ ನೀಡುವಂತಹ ತೀರ್ಪು ಬರಬೇಕು. ಹೀಗಂತ ತನ್ನ ಅಭಿಪ್ರಾಯವನ್ನು ಕೋರ್ಟಿಗೆ ಸುನ್ನಿ ವಕ್ಫ್ ಮಂಡಳಿ ತಿಳಿಸಿದೆ.

ಕೋಟ್ಯಂತರ ಜನರ ಮೇಲೆ ತೀರ್ಪು ಪ್ರಭಾವ ಬೀರಲಿದೆ. ಹೀಗಾಗಿ ತೀರ್ಪು ಬಂದ ಬಳಿಕ ಮುಂದಾಗಬಹುದಾದ ಪರಿಣಾಮವನ್ನೂ ನ್ಯಾಯಾಲಯ ಗಮನ ಹರಿಸಿ ತೀರ್ಪು ನೀಡುವ ಅಗತ್ಯ ಇದೆ ಎಂದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ