ಊರಿನ ಗ್ರಾಮಸ್ಥರು ಕೋಳಿ ಬಲಿ ಕೊಟ್ಟಿದ್ದು ಯಾರಿಗೆ ಗೊತ್ತಾ?
ಸೋಮವಾರ, 20 ಜುಲೈ 2020 (11:28 IST)
Normal0falsefalsefalseEN-USX-NONEX-NONE
ಮೈಸೂರು : ಕೊರೊನಾ ಭೀತಿಯಿಂದ ಜನರು ಕೊರೊನಾ ತಮ್ಮ ಊರಿಗೆ ಬರದಂತೆ ಮಾಡಲು ವಿಚಿತ್ರವಾದ ಮೂಢನಂಬಿಕೆ ಆಚರಣೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಗಾಯತ್ರಿಪುಂ 2ನೇ ಹಂತದಲ್ಲಿ ಕೊರೊನಾ ಬರದಿರಲಿ ಎಂದು ಸ್ಥಳೀಯರೆಲ್ಲಾ ಸೇರಿ ಬೃಹದಾಕಾರದ ರಾಕ್ಷಸಿ ಚಿತ್ರ ಬರೆದು, ಅದಕ್ಕೆ ಕೋಳಿ ಬಲಿ ಕೊಟ್ಟು ಅರಶಿನ ಅನ್ನ, ಬೂದಿ ಅನ್ನ, ಕೋಳಿ ರಕ್ತದ ಅನ್ನವನ್ನು ನೈವೇದ್ಯಕ್ಕಿಟ್ಟಿದ್ದಾರೆ.ಇದರಿಂದ ಕೊರೊನಾ ಮಹಾಮಾರಿ ತಮ್ಮ ಊರಿಗೆ ಬರುವುದಿಲ್ಲ ಎಂಬುದು ಅವರ ನಂಬಿಕೆ ಎನ್ನಲಾಗಿದೆ.