ಬಿಜೆಪಿ ಶಾಸಕನಿಗೆ ಕೊರೊನಾ : ಕಾಂಗ್ರೆಸ್ ಶಾಸಕರೇ ಪ್ರೈಮರಿ ಕಾಂಟಾಕ್ಟ್ಸ್
ಬಿಜೆಪಿ ಶಾಸಕರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅಚ್ಚರಿ ಬೆಳವಣಿಗೆಯಲ್ಲಿ ಇವರ ಪ್ರಾಥಮಿಕ ಸಂಪರ್ಕಕ್ಕೆ ಕಾಂಗ್ರೆಸ್ ಶಾಸಕರಿಬ್ಬರು ಬಂದಿದ್ದಾರೆ.
ಜುಲೈ 17 ರಂದು ಸ್ವ್ಯಾಬ್ ಟೆಸ್ಟ್ ಕೊಟ್ಟಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಯವರಿಗೆ ಕೊರೊನಾ ವೈರಸ್ ಬಂದಿರುವುದು ಜುಲೈ 19ರಂದು ದೃಢಪಟ್ಟಿದೆ. ಜುಲೈ 16ರಂದು ಕೊರೊನಾ ನಿಯಂತ್ರಣ ಕುರಿತ ಜಿಲ್ಲಾಧಿಕಾರಿಗಳು ಆಹ್ವಾನಿಸಿದ್ದ ಸಭೆಗೆ ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸಿದ್ದರು.
ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಯವರ ಎಡ ಹಾಗೂ ಬಲಭಾಗಕ್ಕೆ ಕಾಂಗ್ರೆಸ್ ಶಾಸಕರಾದ ರಾಘವೇಂದ್ರ ಹಿಟ್ನಾಳ ಹಾಗೂ ಅಮರೇಗೌಡ ಬಯ್ಯಾಪುರ ಆಸೀನರಾಗಿದ್ದರು. ಇವರಿಬ್ಬರು ಪರಣ್ಣ ಮುನವಳ್ಳಿಯವರ ಪ್ರೈಮರಿ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಬರುತ್ತಾರೆ.