ಪ್ರೀತಿಸಿದವನನ್ನೇ ಮದುವೆಯಾಗುವೆ ಎಂದ ಯುವತಿಗೆ ತಂದೆ-ಸಹೋದರಾ ಹೀಗಾ ಮಾಡೋದು?

ಸೋಮವಾರ, 7 ಡಿಸೆಂಬರ್ 2020 (07:33 IST)
ಚಾಮರಾಜನಗರ :  ತಂದೆ ಮತ್ತು ಸಹೋದರ ಸೇರಿ 24 ವರ್ಷದ ಯುವತಿಯ ನಾಲ್ಕು ಬೆರಳುಗಳನ್ನು ಕತ್ತರಿಸಿದ ಘಟನೆ ಚಾಮರಾಜ್ ನಗರದ ಹನೂರ್ ತಾಲೂಕಿನ ಪಿಜಿ ಪಲ್ಮಾಗ್ರಾಮದಲ್ಲಿ ನಡೆದಿದೆ.

ಸಂತ್ರಸ್ತ ಯುವತಿ ಸತ್ಯ ಎನ್ನುವ ಹುಡುಗನನ್ನು ಪ್ರೀತಿಸುತ್ತಿದ್ದು, ಅವನನ್ನೇ ಮದುವೆಯಾಗುವುದಾಗಿ ತನ್ನ ಮನೆಯವರಿಗೆ ತಿಳಿಸಿದ್ದಾಳೆ. ಈ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ ಯುವತಿಯ ತಂದೆ ಹಾಗೂ ಸಹೋದರ ಕೋಪದಿಂದ ಆಕೆಯ ನಾಲ್ಕು ಬೆರಳುಗಳನ್ನು ಕತ್ತರಿಸಿದ್ದಾರೆ. ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ