ಹಾಲು ಕೊಡಲು ಹೋಗ್ತಿದ್ದ ಮಹಿಳೆಗೆ ದಾರಿಯಲ್ಲಿ ಏನಾಯ್ತು?
ಆ ಮಹಿಳೆ ಎಂದಿನಂತೆ ನಡೆದುಕೊಂಡು ಡೈರಿಗೆ ಹಾಲು ಕೊಡಲು ಹೊರಟಿದ್ದಳು. ಆದರೆ ಮಾರ್ಗಮಧ್ಯೆ ಆಗಬಾರದ ಅನಾಹುತ ಆಗಿಬಿಟ್ಟಿದೆ.
ರಸ್ತೆ ಬದಿಯಲ್ಲಿ ನಡೆದು ಡೈರಿಗೆ ಹಾಲು ಹಾಕಲು ಹೋಗುತ್ತಿದ್ದ ಮಹಿಳೆಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಮಹಿಳೆ ಸಾವನ್ನಪ್ಪಿದ್ದಾಳೆ. ಈ ಘಟನೆಯು ಮಂಡ್ಯದ ಸಂತೇಬಾಚಹಳ್ಳಿ ಹೋಬಳಿಯ ಹರಪನಹಳ್ಳಿ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಹರಪನಹಳ್ಳಿ ಬಳಿ ಮುಖ್ಯರಸ್ತೆಯಲ್ಲಿ ಅಪರಿಚಿತ ಕಾರು ಡಿಕ್ಕಿ ಹೊಡೆದಿದ್ದರಿಂದ ಮಹಿಳೆ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು 108 ಆಂಬ್ಯುಲೆನ್ಸ್ ನಲ್ಲಿ ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ರು.
ಹರಪನಹಳ್ಳಿ ಗ್ರಾಮದ ಭಾಗ್ಯಮ್ಮ (40) ಮೃತ ಮಹಿಳೆಯಾಗಿದ್ದಾರೆ. ಕೆ.ಆರ್.ಪೇಟೆ ಪಟ್ಟಣ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.