ಗಂಡನಿಗೆ ಕೈ ಕೊಟ್ಟು ಲವರ್ ಜೊತೆ ಹೋದವಳಿಗೆ ಏನಾಯ್ತು?

ಗುರುವಾರ, 15 ಅಕ್ಟೋಬರ್ 2020 (11:18 IST)
ಕೈ ಹಿಡಿದ ಗಂಡ, ಹೆತ್ತ ಮಗುವಿಗೆ ಕೈ ಕೊಟ್ಟು ಲವರ್ ಜೊತೆ ಹೋಗಿದ್ದ ಮಹಿಳೆಗೆ ಆಗಬಾರದ್ದು ಆಗಿದೆ.

22 ವರ್ಷದ ಗೃಹಿಣಿ ತನ್ನ ಮಗು, ಗಂಡನನ್ನು ಬಿಟ್ಟು ಪ್ರಿಯಕರನ ಹತ್ತಿರ ಓಡಿಹೋಗಿದ್ದಳು.
ಆದರೆ ಪ್ರಿಯಕರ ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಬಾವಿಯಲ್ಲಿ ದೂಡಿ ಪರಾರಿಯಾಗಿದ್ದನು.

ಪ್ರಿಯಕರ ಆದರ್ಶ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಮಾಲೂರಿನ ಸೊಣ್ಣಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಬಾವಿಯಲ್ಲಿ ಮೂರ್ನಾಲ್ಕು ದಿನ ಹೋರಾಟ ನಡೆಸಿದ ಮಹಿಳೆಯ ಕೂಗಾಟ ಕೇಳಿ ಅಕ್ಕಪಕ್ಕದವರು ರಕ್ಷಿಸಿ ಪೊಲೀಸರ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ