ಗ್ರೀನ್ ಝೋನ್ ನಲ್ಲಿರೋ ಜಿಲ್ಲೆಯಲ್ಲಿ ಏನೇನ್ ಆಗ್ತಿದೆ?

ಬುಧವಾರ, 29 ಏಪ್ರಿಲ್ 2020 (16:13 IST)
ಗ್ರೀನ್ ಝೋನ್ ಪಟ್ಟಿಯಲ್ಲಿರುವ ಜಿಲ್ಲೆಯಲ್ಲಿ ಲಾಕ್ ಡೌನ್ ನಿಂದ ಕೊಂಚ ರಿಲೀಫ್ ಸಿಕ್ಕಿದೆ.

ಚಿತ್ರದುರ್ಗ ಗ್ರೀನ್ ಝೋನ್‌ ಪಟ್ಟಿಯಲ್ಲಿ ಸೇರಿರುವ ಹಿನ್ನೆಲೆಯಲ್ಲಿ ಸರ್ಕಾರದ ನೂತನ ಮಾರ್ಗಸೂಚಿಯಂತೆ  ಕೊಂಚ ರಿಲೀಫ್ ಸಿಕ್ಕಿದ್ದು, ಕೆಲವು ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ.  

ಸಣ್ಣ-ಪುಟ್ಟ ಕೈಗಾರಿಕೆ ಸೇರಿದಂತೆ  ಸಾಮಾಜಿಕ ಅಂತರ ಕಾಯ್ದುಕೊಂಡು ಶೇ. 50ರಷ್ಟು ಸಿಬ್ಬಂದಿಯನ್ನ ಮಾತ್ರ ಕೆಲಸಕ್ಕೆ ಅವಕಾಶ ಮಾಡಿಕೊಡಲಾಗಿದೆ. ‌

ಇನ್ನೂ ಕ್ಷೌರಿಕ ಅಂಗಡಿಗಳು, ಬ್ಯೂಟಿ ಪಾರ್ಲರಗಳು, ಹೋಟೆಲ್, ಢಾಬಾ, ಸಿನಿಮಾ ಥೇಟರ್‍ಗಳು , ಅಂತರ್ ಜಿಲ್ಲಾ ಮಾನವ ಸಾಗಾಣಿಕೆ, ಬಸ್, ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆಗಳು,  ಶೈಕ್ಷಣಿಕ ಸಂಸ್ಥೆಗಳು ಅಥವಾ ತರಬೇತಿ ಅಥವಾ ಕೋಚಿಂಗ್ ಕೇಂದ್ರಗಳು, ವ್ಯಾಯಾಮ ಶಾಲೆಗಳು, ಕ್ಲಬ್‍ಗಳು, ರೆಸಾರ್ಟಗಳು, ಸ್ವಿಮಿಂಗ್ ಪೂಲ್, ಉದ್ಯಾನವನಗಳು, ಸಮುದಾಯ ಭವನಗಳು, ಆಡಿಟೋರಿಯಂ, ಸಂತೆ, ಜಾತ್ರೆ, ಧಾರ್ಮಿಕ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳು ಹಾಗೂ  ಸಮಾರಂಭಗಳು, ಗುಟಖಾ ಅಥವಾ ತಂಬಾಕು ಅಂಗಡಿಗಳು ಆರಂಭಕ್ಕೆ ಸದ್ಯಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ