ಲಾಕ್ ಡೌನ್ 3.0 ಏನಿರುತ್ತೆ? ಏನಿರಲ್ಲಾ?
ಕೋವಿಡ್ – 19 ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್ ಡೌನ್ ಮುಂದುವರಿಸಲಾಗಿದೆ. ಈ ನಡುವೆ ಏನಿರುತ್ತೆ? ಏನಿರಲ್ಲ ಅನ್ನೋ ಕುತೂಹಲ ಜನರಲ್ಲಿದೆ.
ದೇಶಾದ್ಯಂತ ಮೆಟ್ರೋ, ರೈಲು, ವಿಮಾನ ಸಂಚಾರ ಬಂದ್ ಇರಲಿವೆ. ರೆಡ್ ಝೋನ್ ನಲ್ಲಿರುವ ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಹೊರತು ಪಡಿಸಿ ಬಹುತೇಕ ಎಲ್ಲವೂ ಬಂದ್ ಇರಲಿವೆ.
ಆರೆಂಜ್ ಝೋನ್ ನಲ್ಲಿ ಟ್ಯಾಕ್ಸಿ, ಕಾರು, ಬೈಕ್ ನಲ್ಲಿ ಸಂಚರಿಸೋಕೆ ಅವಕಾಶವಿದೆ.
ಇನ್ನು ಗ್ರೀನ್ ಝೋನ್ ನಲ್ಲಿ ದೇಶಾದ್ಯಂತ ನಿರ್ಬಂಧಗೊಳಿಸಲಾಗಿರುವ ಚಟುವಟಿಕೆ ಹೊರತು ಪಡಿಸಿ ಉಳಿದೆಲ್ಲವೂ ಶುರುವಾಗಲಿವೆ.