ಕೊರೊನಾ ವೈರಸ್ 7 ಸೋಂಕಿತರ ಆರೋಗ್ಯ ಹೇಗಿದೆ ಗೊತ್ತಾ?
ಏಳೂ ಸೋಂಕಿತರು ಭಟ್ಕಳದವರಾಗಿದ್ದು, ಆರಂಭದಲ್ಲಿ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಹೆಚ್ಚಿನ ವೈದ್ಯಕೀಯ ಸೌಕರ್ಯ ಕಲ್ಪಿಸುವುದಲ್ಲದೇ ಆಸ್ಪತ್ರೆಯಲ್ಲಿ ಸೋಂಕಿತರ ಕುಟುಂಬದವರು , ಸಂಬಂಧಿಗಳಿಂದ ಉಂಟಾಗುವ ದಟ್ಟಣೆ ತಡೆಗಟ್ಟಲು ಆರು ಜನರನ್ನು ಪತಂಜಲಿಗೆ ಸೇರಿಸಲಾಗಿದೆ.
ಸೋಂಕಿತರ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡುಬರದೆ ಚಿಕಿತ್ಸೆಗೆ ಸ್ಪಂದಿಸುತ್ತಿರುವುದು ಕೊರೊನಾದಿಂದ ಆತಂಕಗೊಂಡಿರುವ ಜಿಲ್ಲೆಯ ಜನತೆಗೆ ಕೊಂಚ ನೆಮ್ಮದಿ ತಂದಿದೆ.