40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಸರ್ವೇ ರಿಪೋರ್ಟ್ಗಳಲ್ಲಿ ಗೊಂದಲ ಹಾಗೂ ವ್ಯತ್ಯಾಸ ಕಂಡುಬಂದಿದೆ. ನೈಜ ವರದಿ ನೀಡಲು ರಾಜ್ಯ ನಾಯಕರಿಗೆ ಸೂಚನೆ ನೀಡಲಾಗಿದೆ. ಹಲವು ಕ್ಷೇತ್ರಗಳಲ್ಲಿ ಭಾರೀ ಬಂಡಾಯ ಭೀತಿ ಎದುರಾಗಿದ್ದು, ಟಿಕೆಟ್ ಆಕಾಂಕ್ಷಿಗಳ ಬಂಡಾಯ ಮುಂದೂಡಲು ಹೊಸ ತಂತ್ರ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಟಿಕೆಟ್ ಹಂಚಿಕೆ ರಹಸ್ಯವಾಗಿದ್ದು, ಕುಟುಂಬ ರಾಜಕಾರಣಕ್ಕೆ ಅಂತ್ಯ ಆಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದರೆ, ಎಲ್ಲರಿಗೂ ಈ ನಿಯಮ ಅನ್ವಯ ಅನುಮಾನವಾಗಿದೆ. ಶಿಕಾರಿಪುರದಿಂದ ತಮ್ಮ ಬದಲಾಗಿ ಪುತ್ರ ವಿಜಯೇಂದ್ರನಿಗೆ ಬಿಎಸ್ವೈ ಟಿಕೆಟ್ ಕೇಳಿದ್ದಾರೆ.
ಈ ನಡುವೆ ಸಚಿವ ವಿ. ಸೋಮಣ್ಣ ಪುತ್ರ ಅರುಣ್ಗೆ ಗುಬ್ಬಿ ಕ್ಷೇತ್ರದಿಂದ ಟಿಕೆಟ್ ಕೇಳಿದ್ದಾರೆ. ಸವಿವ ಎಂಟಿಬಿ ನಾಗರಾಜು ಪುತ್ರ ನಿತಿನ್ಗೆ ಹೊಸಕೋಟೆಯಿಂದ, ಶಾಸಕ ತಿಪ್ಪಾರೆಡ್ಡಿ ಪುತ್ರ ಡಾ. ಸಿದ್ದಾರ್ಥ್ಗೆ ಚಿತ್ರದುರ್ಗದಿಂದ, ಮಾಡಾಳ್ ವಿರೂಪಾಕ್ಷಪ್ಪ ಮಲ್ಲಿಕಾರ್ಜುನ್ಗೆ ಚನ್ನಗಿರಿ ಕ್ಷೇತ್ರದಿಂದ, ಸಂಸದ ಸಿದ್ದೇಶ್ವರ ಪುತ್ರ ಅನಿತ್ಗೆ ದಾವಣಗೆರೆ ಉತ್ತರ ಕ್ಷೇತ್ರದಿಂದ, ದಿವಂಗತ ಉಮೇಶ್ ಕತ್ತಿ ಕುಟುಂಬಸ್ಥರು ಹುಕ್ಕೇರಿ ಕ್ಷೇತ್ರದಿಂದ ಹಾಗೂ ದಿವಂಗತ ಆನಂದ್ ಮಾಮನಿ ಕುಟುಂಬಸ್ಥರು ಸವದತ್ತಿ ಕ್ಷೇತ್ರದಿಂದ ಟಿಕೆಟ್ಗೆ ಬೇಡಿಕೆಯಿಟ್ಟಿದ್ದಾರೆ. ಆದರೆ ವಿಜಯೇಂದ್ರಗೆ ಶಿಕಾರಿ ಪುರದಿಂದ ಬಹುತೇಕ ಟಿಕೆಟ್ ಫಿಕ್ಸ್ ಆಗಿದ್ದು, ಉಳಿದವರಿಗೆ ಟಿಕೆಟ್ ನೀಡುವುದು ಸಂಶಯವಾಗಿದೆ.