ಮುಖಕ್ಕೆ ಸ್ಕಾರ್ಫ್ ಹಾಕಿಕೊಂಡ ಬಂದ ವಿದ್ಯಾರ್ಥಿನಿಯೊಬ್ಬಳು ಮತ್ತೆ ವಿವಾದ ಹುಟ್ಟುಹಾಕಿದ್ದಾಳೆ.
ಮಂಗಳೂರು ನಗರದ ಸಂತ ಆಗ್ನೇಸ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಮುಖಕ್ಕೆ ಸ್ಕಾರ್ಫ್ ಹಾಕಿಕೊಂಡು ಬಂದಿರೋದು ವಿವಾದಕ್ಕೆ ಕಾರಣವಾಗಿದೆ. ದ್ವಿತೀಯ ಪಿಯು ಪ್ರವೇಶಕ್ಕೆ ವಿದ್ಯಾರ್ಥಿನಿಯ ಪ್ರವೇಶ ನಿರಾಕರಿಸಲಾಗಿದೆ.
ಕಾಲೇಜಿನ ಕ್ರಮದ ವಿರುದ್ಧ ವಿದ್ಯಾರ್ಥಿನಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾಳೆ. ಫಾತಿಮಾ ಇದೇ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ. ದ್ವಿತೀಯ ಪಿಯುಗೆ ಎಡ್ಮಿಷನ್ ಮಾಡೋವಾಗ ಪ್ರಿನ್ಸಿಪಾಲರು ಪ್ರವೇಶ ನಿರಾಕರಣೆ ಮಾಡಿದ್ದಾರೆ.
ಕಾಲೇಜಿಗೆ ಬರೋದಕ್ಕೆ ಯುನಿಫಾರ್ಮ್ ಇದೆ. ಇದನ್ನು ಕಡ್ಡಾಯವಾಗಿ ಎಲ್ರೂ ಪಾಲಿಸಬೇಕು ಎನ್ನೋದು ಕಾಲೇಜು ಆಡಳಿತ ಮಂಡಳಿ ವಾದ. ಆದರೆ ಕಾಲೇಜು ನಿಯಮ ಮೀರಿ ಮುಸ್ಲಿಂ ಹುಡುಗಿ ಮುಖಕ್ಕೆ ಸ್ಕಾರ್ಫ್ ಹಾಕಿರುವುದು ವಿವಾದ ಹುಟ್ಟುಹಾಕಿದೆ.