ವಾಟ್ಸ್ಆಯಪ್ ಗ್ರೂಪ್ ಕಮ್ಯುನಿಕೇಷನ್ ಸಂದರ್ಭದಲ್ಲಿ ಹ್ಯಾಕರುಗಳು ಭದ್ರತಾ ವೈಫಲ್ಯವನ್ನು ಬಳಸಿಕೊಂಡು, ಮೆಸೇಜ್ ಹಾಗೂ ವಾಯ್ಸ್ ಕರೆಗಳನ್ನು ಹ್ಯಾಕ್ ಮಾಡಬಹುದು ಎಂದು ವಾಟ್ಸ್ಆಯಪ್ ಸುರಕ್ಷತೆ ಹಾಗೂ ಸೈಬರ್ ಭದ್ರತೆ ಕುರಿತು ಸಂಶೋಧನೆ ನಡೆಸಿದ ಚೆಕ್ ಪಾಯಿಂಟ್ ರಿಸರ್ಚ್ ಸಂಸ್ಥೆ ತಿಳಿಸಿದೆ.
ವಾಟ್ಸಪ್ ಸಂದೇಶ ಸಂಪೂರ್ಣ ಎನ್‌ಕ್ರಿಪ್ಷನ್ ಹೊಂದಿದ್ದರೂ, ಅದನ್ನು ಬೇಧಿಸಿ ವಾಟ್ಸಪ್ ಮೆಸೇಜ್ ಅನ್ನು ಮೂರು ವಿಧಾನಗಳಲ್ಲಿ ಹ್ಯಾಕ್ ಮಾಡಲು ಸಾಧ್ಯ ಎಂದು ಹೇಳಿದೆ. ಅದರಂತೆ ಗ್ರೂಪ್ ಕಮ್ಯುನಿಕೇಷನ್ನಲ್ಲಿರುವ ಕೋಟ್ ಟೆಕ್ಸ್ಟ್ ಬಳಸಿ, ಮೆಸೇಜ್ ಕಳುಹಿಸಿದಾತನ ಹೆಸರು ಹಾಗೂ ಮೆಸೇಜ್ ಅನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ ಕೋಟೆಡ್ ರಿಪ್ಲೈ ಅನ್ನು ಬಳಸಿ ಗ್ರೂಪಿನಲ್ಲಿ ಮೆಸೇಜ್ ಬದಲಾಯಿಸಿಕೊಳ್ಳಬಹುದು. ಹಾಗೇ ಖಾಸಗಿ ಸಂದೇಶವನ್ನು ಹ್ಯಾಕ್ ಮಾಡಿ, ಇನ್ನೊಂದು ಗ್ರೂಪ್ಗೆ ಕಳುಹಿಸಬಹುದಾಗಿದೆ. ಎಂದು ಚೆಕ್ ಪಾಯಿಂಟ್ ಸಂಶೋಧನೆಯ ಮೂಲಕ ತಿಳಿಸಿದೆ.