ಲೈಂಗಿಕ ದೌರ್ಜನ್ಯ ನೀಡಿದ ತಂದೆ ಮುಂದೇನಾಯ್ತು?

ಮಂಗಳವಾರ, 23 ನವೆಂಬರ್ 2021 (16:59 IST)
ಬೆಂಗಳೂರು :  ಮನೆಗೆ ನುಗ್ಗಿ ವ್ಯಕ್ಯಿಯ ಹತ್ಯೆ  ಪ್ರಕರಣ ಸಂಬಂಧ ಮೃತನ ಪುತ್ರಿ ಸೇರಿ ನಾಲ್ವರು ಅಪ್ರಾಪ್ತರನ್ನು ಯಲಹಂಕ  ನ್ಯೂ ಟೌನ್ ಪೊಲೀಸರು  ವಶಕ್ಕೆ ಪಡೆದಿದ್ದಾರೆ. 
ಅಟ್ಟೂರು ವಾರ್ಡ್ ನಿವಾಸಿ ದೀಪಕ್ ಕುಮಾರ್ ಸಿಂಗ್(45) ಹತ್ಯೆಯಾದವರು. ಭಾನುವಾರ ತಡರಾತ್ರಿ ದುಷ್ಕರ್ಮಿಗಳ ಗುಂಪೊಂದು ಏಕಾಏಕಿ ಮನೆಗೆ ನುಗ್ಗಿ ದೀಪಕ್ ಮೇಲೆ ಹಲ್ಲೆ ಗೈದು ಪರಾರಿಯಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಗಾಯಾಳು ದೀಪಕ್ ಮನೆಯಲ್ಲೇ ಮೃತ ಪಟ್ಟಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನ  ಮೇರೆಗೆ ಮೃತನ ಪುತ್ರಿ ಸೇರಿ ನಾಲ್ವರನ್ನು ಪೊಲೀಸರು  ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಮತ್ತೋರ್ವ ತಲೆ ಮರೆಸಿಕೊಂಡು ಆತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬಿಹಾರ  ಮೂಲದ ದೀಪಕ್ ಜಿಕೆವಿಕೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಹಲವು ವರ್ಷಗಳಿಂದ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ನಗರದಲ್ಲಿ ನೆಲೆಸಿದ್ದರು. ಹಿರಿಯ ಪುತ್ರಿ ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಎರಡನೇ ಪುತ್ರಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಭಾನುವಾರ ತಡರಾತ್ರಿ 12.30ರ ಸುಮಾರಿಗೆ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರ ಹಿಡಿದು ಏಕಾಏಕಿ ದೀಪಕ್ ಮನೆಗೆ ನುಗ್ಗಿ ಹಲ್ಲೆ  ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ