ಎಲ್ಲಾ ಮುಗಿದ ಮೇಲೆ ಐಟಿ ರೈಡ್ ಮಾಡಿದ್ರೆ ಏನು ಪ್ರಯೋಜನ: ಕುಮಾರಸ್ವಾಮಿ

ಸೋಮವಾರ, 21 ನವೆಂಬರ್ 2016 (19:33 IST)
ಮಾಜಿ ಸಚಿವ ಗಾಲಿ ಜನಾರ್ದನ ಪುತ್ರಿಯ ಅದ್ಧೂರಿ ವಿವಾಹದಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರೆ ಬೇರೆ ಇತ್ತು. ಆದರೆ, ಎಲ್ಲಾ ಮುಗಿದ ಮೇಲೆ ದಾಳಿ ಮಾಡಿದರೆ ಏನು ಪ್ರಯೋಜನ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
 
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿಯ ಅದ್ಧೂರಿ ವಿವಾಹದಂದೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರೆ ಪ್ರಯೋಜನೆಯಾಗುತ್ತಿತ್ತು. ಆದರೆ, ಎಲ್ಲಾ ಮುಗಿದ ಮೇಲೆ ಅವರಿಗೆ ಮಾಹಿತಿ ನೀಡಿ ದಾಳಿ ನಡೆಸಿದರೆ ಏನು ಪ್ರಯೋಜನ. ಐಟಿ ದಾಳಿ ಕುರಿತು ರೆಡ್ಡಿದೆ ಮೊದಲೇ ತಿಳಿದಿತ್ತು ಎಂದು ಆರೋಪಿಸಿದರು.
 
ಐಟಿ ಅಧಿಕಾರಿಗಳು ಇಂದು ರೆಡ್ಡಿ ನಿವಾಸ ಸೇರಿದಂತೆ ಒಎಂಸಿ ಹಾಗೂ ಎಎಂಸಿ ಕಚೇರಿಯ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಲ್ಲದೆ. ಪುತ್ರಿಯ ಅದ್ಧೂರಿ ವಿವಾಹದ ಲೆಕ್ಕದ ವರದಿಯನ್ನು ನವೆಂಬರ್ 25 ರೂಳಕ್ಕೆ ಸಲ್ಲಿಸುವಂತೆ ನೋಟಿಸು ನೀಡಿತ್ತು. 
 
ನೋಟ್ ಬ್ಯಾನ್ ನಿರ್ಧಾರ ಖಂಡನೀಯ........
 
ಕಪ್ಪು ಹಣ ತಡೆಗಟ್ಟುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಏಕಾಏಕಿ 500, 1000 ನೋಟು ಬ್ಯಾನ್ ಮಾಡಿರುವ ನಿರ್ಧಾರ ಖಂಡನೀಯ. ಎಪಿಎಂಸಿ ಯಾರ್ಡ್‌ನಲ್ಲಿ ಊಟಕ್ಕೂ ಕಾಸಿಲ್ಲದೆ ರೈತರು ಪರದಾಡುತ್ತಿದ್ದಾರೆ. ಆದರೆ, ಬಿಜೆಪಿಯವರು ಮಾತ್ರ ಮೋದಿ ನಿರ್ಧಾರ ಅದ್ಭುತ ಎನ್ನುವಂತೆ ಪ್ರಚಾರ ನೀಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ