ನಿಶ್ಚಯವಾಗುತ್ತಿದ್ದ ಹುಡುಗಿಯೊಬ್ಬಳ ಮದುವೆಯನ್ನು ಪೊಲೀಸರು ಮುಂದೆ ನಿಂತು ತಡೆದಿದ್ದಾರೆ.
15 ವರ್ಷದ ಅಪ್ರಾಪ್ತೆಯೊಬ್ಬಳ ಮದುವೆಯನ್ನ ಪೊಲೀಸರು ತಡೆದಿದ್ದಾರೆ.
ಸಂಬಂಧಿಕರಲ್ಲೇ ಹುಡುಗಿಗೆ ವರನನ್ನು ಗೊತ್ತು ಮಾಡಿದ್ರು. ಮದುವೆ ಸಿದ್ಧತೆಯೂ ನಡೆದಿತ್ತು. ಆದರೆ ಹುಡುಗಿಯು ಮದುವೆಗೆ ತಾನು ಸಿದ್ಧವಿಲ್ಲ. ನನಗೆ ಮದುವೆ ಇಷ್ಟ ಇಲ್ಲ ಅಂತೆಲ್ಲ ಬೆಂಗಳೂರು ಸಿಟಿ ಪೊಲೀಸ್ ಪೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಳು.
ಹೀಗಾಗಿ ಅಪ್ರಾಪ್ತೆಯ ಕಷ್ಟ ಆಲಿಸಿದ ಪೊಲೀಸರು ಆಕೆಯ ಮದುವೆಯನ್ನು ತಡೆದಿದ್ದಾರೆ. ಅಂದ್ಹಾಗೆ ಮೈಸೂರು ಪೊಲೀಸರು ಮಾರ್ಬಳ್ಳಿಹುಂಡಿ ಗ್ರಾಮಕ್ಕೆ ಭೇಟಿ ನೀಡಿ ಮದುವೆ ಮಾತುಕತೆ ತಡೆದಿದ್ದಾರೆ.