ತೆಂಗಿನಕಾಯಿ ಸೋಗಿನಲ್ಲಿ ಆ ವಸ್ತುವನ್ನು ಸಾಗಿಸಿದ್ದು ಎಲ್ಲಿಗೆ?

ಭಾನುವಾರ, 5 ಮೇ 2019 (18:05 IST)
ತೆಂಗಿನಕಾಯಿ ಮಾರಾಟ ಮಾಡುವ ಸೋಗಿನಲ್ಲಿ ಅಕ್ರಮವಾಗಿ ಹಾಗೂ ಕಾನೂನು ಬಾಹಿರ ವಸ್ತುವನ್ನು ಸಾಗಾಟ ಮಾಡುತ್ತಿರೋ ಜಾಲ ಬಯಲಾಗಿದೆ.

ತೆಂಗಿನ ಕಾಯಿ ಸೋಗಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸುಮಾರು 35 ಲಕ್ಷ ಮೌಲ್ಯದ 650 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಬೀದರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ.

ಬೀದರ್ ಜಿಲ್ಲೆ ಔರಾದ್ ತಾಲೂಕಿನ ಘಾಮಾ ತಾಂಡಾದ ಬಳಿ ನಿವಾಸದಲ್ಲಿ ಸಂಗ್ರಹ ಮಾಡಿದ್ದು, ಇಲ್ಲಿಂದ ಅಂತರ್ ರಾಜ್ಯಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದರು. ಜಂಬಗಿ‌ ನಿವಾಸಿ ಅನೀಲ್ ಹಾಗೂ ವಿಜಯ್ ಬಂಧನವಾಗಿದ್ದು, ಮನೆಯ ಮಾಲೀಕ ವಿಜಯ ಹಾಗೂ ಅನೀಲ್ ಪರಾರಿಯಾಗಿದ್ದಾರೆ. ಅವರ ಶೋಧಕ್ಕಾಗಿ ಬಲೆ ಬೀಸಲಾಗಿದೆ.

ಒಂದು ಕಾರು, ಮೂರು ಬೈಕ್ ಜಪ್ತಿ ಮಾಡಿಕೊಂಡಿದ್ದು, ತಡರಾತ್ರಿ ಭರ್ಜರಿ ಕಾರ್ಯಾಚರಣೆ ಮಾಡಿದ ಪೊಲೀಸರಿಗೆ ತಲಾ ಒಂದು ಲಕ್ಷ ಬಹುಮಾನವನ್ನು ಎಸ್ಪಿ  ಘೋಷಣೆ ಮಾಡಿದ್ದಾರೆ. ಘಟನೆ ಕುರಿತು ಸಂತಪೂರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ