ಇರುವೆಗಳನ್ನು ವಶಕ್ಕೆ ಪಡೆದ ಚೀನಾ ಅಧಿಕಾರಿಗಳು. ಕಾರಣವೇನು ಗೊತ್ತಾ?
ಮಂಗಳವಾರ, 30 ಏಪ್ರಿಲ್ 2019 (12:04 IST)
ಚೀನಾ : ಚೀನಾದ ಅಧಿಕಾರಿಗಳು ಕೊರಿಯರ್ ಮೂಲಕ ಸಾಗಾಣೆಯಾಗುತ್ತಿದ್ದ ಪಾರ್ಸಲ್ ವೊಂದರಲ್ಲಿರುವ ಇರುವೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರಂತೆ.
ಈ ಪಾರ್ಸೆಲ್ ಬ್ರಿಟನ್ ನಿಂದ ಬಂದಿದ್ದು, ಇದರಲ್ಲಿ 37 ಕೆಂಪು ಮತ್ತು ಕಪ್ಪು ಬಣ್ಣದ ಇರುವೆಗಳೂ ಸೇರಿ ಒಟ್ಟು ಒಂದು ಸಾವಿರ ಇರುವೆಗಳಿವೆಯಂತೆ.
ಜೀವಂತ ಇರುವೆಗಳನ್ನು ಪಾರ್ಸಲ್ ಮೂಲಕ ಸಾಗಾಟ ಮಾಡುವುದು ಚೀನಾದಲ್ಲಿ ನಿಷೇಧಿಸಲಾಗಿದೆ. ಅಲ್ಲದೇ ಸ್ಥಳೀಯವಲ್ಲದ ಇಂಥ ಇರುವೆಗಳಿಂದ ನಮ್ಮ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಅವುಗಳನ್ನು ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.