ಸುಳ್ವಾಡಿ ಎಫೆಕ್ಟ್ ಎಲ್ಲೆಲ್ಲಿದೆ ಗೊತ್ತಾ?

ಮಂಗಳವಾರ, 5 ಮಾರ್ಚ್ 2019 (18:35 IST)
ಸುಳ್ವಾಡಿ ದೇವಸ್ಥಾನ ವಿಷ ಪ್ರಸಾದ ಪ್ರಕರಣ ಎಫೆಕ್ಟ್ ಜೋರಾಗಿದೆ. ಹೀಗಾಗಿ ಪ್ರಸಾದದ ಗುಣಮಟ್ಟ ಪರಿಶೀಲನೆ ನಡೆಸಿಯೇ ಭಕ್ತರಿಗೆ ನೀಡಲಾಗುತ್ತಿದೆ.

ಸುಳ್ವಾಡಿ ಕೇಸ್ ಎಫೆಕ್ಟ್ ವ್ಯಾಪಕವಾಗಿ ತಟ್ಟಿದೆ. ಹೀಗಾಗಿ ಪ್ರಸಾದ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತಿದೆ. ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಸ್ಥಾನದ ಪ್ರಸಾದ ಪರಿಶೀಲನೆ ನಡೆಸಲಾಯಿತು.

ಭಕ್ತರಿಗೆ ಪ್ರಸಾದ ವಿನಿಯೋಗ ಮುನ್ನ ಪ್ರಸಾದ ಪರಿಶೀಲಿಸಿದರು ಆರೋಗ್ಯ ಇಲಾಖೆ ಅಧಿಕಾರಿಗಳು. ಸಾವಿರಾರು ಭಕ್ತರಿಗೆ ಪ್ರಸಾದ ವಿನಯೋಗ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಥಳದಲ್ಲೇ ಪ್ರಸಾದ ತಯಾರಿಸುತ್ತಿರುವ ಅಡುಗೆ ಸಿಬ್ಬಂದಿಗಳಿಂದ ಉಪ್ಪಿಟ್ಟು ಹಾಗೂ ಕೇಸರಿಬಾತ್ ತಯಾರಿ ನಡೆಸುತ್ತಿರುವಾಗ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಲಾಯಿತು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ