ಈ ಆಹಾರಗಳ ಜೊತೆಗೆ ಹಣ್ಣನ್ನು ಸೇವಿಸಿದರೆ ನಿಮ್ಮ ಆರೋಗ್ಯ ಹಾಳಾಗೋದು ಖಂಡಿತ
ಸೋಮವಾರ, 4 ಮಾರ್ಚ್ 2019 (10:20 IST)
ಬೆಂಗಳೂರು : ಆರೋಗ್ಯಕರ ಆಹಾರ ದೇಹಕ್ಕೆ ಬಹಳ ಒಳ್ಳೆಯದು. ಹಾಗೇ ಹಣ್ಣುಗಳು ಕೂಡ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಕೆಲವೊಂದು ಆಹಾರವನ್ನು ಹಣ್ಣಿನ ಜೊತೆಗೆ ತಿಂದರೆ ನೀವು ಅನಾರೋಗ್ಯಕ್ಕೊಳಗಾಗುವುದು ಖಂಡಿತ.
ಹೌದು. ಆಯುರ್ವೇದದ ಪ್ರಕಾರ ಬಾಳೆಹಣ್ಣಿನ ಜೊತೆ ಹಾಲನ್ನು ಕುಡಿಯಬಾರದು. ಇದು ವಿಷವಾಗಿ ಮಾರ್ಪಡುತ್ತದೆ. ಬೆಳಗಿನ ಉಪಹಾರದ ಜೊತೆ ಬಾಳೆಹಣ್ಣು, ಹಾಲನ್ನು ಸೇವನೆ ಮಾಡಿದ್ರೆ ಇಡೀ ದಿನ ಸೋಮಾರಿತನ ನಿಮ್ಮನ್ನು ಕಾಡುತ್ತದೆಯಂತೆ. ಹಣ್ಣಿನ ಜೊತೆ ಮೊಸರು ಸೇವನೆ ಒಳ್ಳೆಯದಲ್ಲ. ಇದು ಆಯಾಸ, ಅಲರ್ಜಿ ಸೇರಿದಂತೆ ಅನೇಕ ಸಮಸ್ಯೆಗೆ ಕಾರಣವಾಗುತ್ತದೆಯಂತೆ.
ಹಾಗೇ ಊಟವಾದ ತಕ್ಷಣ ಹಣ್ಣುಗಳನ್ನು ತಿನ್ನಬಾರದು. ಹಣ್ಣು ಸುಲಭವಾಗಿ ಜೀರ್ಣವಾಗುತ್ತದೆ. ಆದ್ರೆ ಆಹಾರದಲ್ಲಿರುವ ಕೊಬ್ಬು ಮತ್ತು ಪಿಷ್ಟ ಜೀರ್ಣವಾಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಇದ್ರಿಂದ ಹಣ್ಣಿನಲ್ಲಿರುವ ಸಕ್ಕರೆ ಅಂಶ ಸುಲಭವಾಗಿ ಜೀರ್ಣವಾಗದೆ ಅನೇಕ ರೋಗಗಳು ಕಾಡುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.