ಅಧಿಕಾರ ಯಾರಿಗೆ?: ನಂಬರ್ ಗೇಮ್ ನತ್ತ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಚಿತ್ತ
ಶನಿವಾರ, 6 ಜುಲೈ 2019 (18:50 IST)
ಮೈತ್ರಿ ಸರಕಾರಕ್ಕೆ ರಾಜೀನಾಮೆ ನೀಡುವ ಮೂಲಕ ಜೆಡಿಎಸ್ – ಕಾಂಗ್ರೆಸ್ ಶಾಸಕರು ಶಾಕ್ ನೀಡಿದ್ದಾರೆ. ಏತನ್ಮಧ್ಯೆ ರಾಜ್ಯದಲ್ಲಿ ಚುಕ್ಕಾಣಿ ಹಿಡಿಯಲು ಮತ್ತೆ ನಂಬರ್ ಗೇಮ್ ಶುರುವಾಗಿದೆ.
ಸರಕಾರದ ವಿರುದ್ಧ ಹಾಗೂ ಆಯಾ ಪಕ್ಷಗಳ ಮುಖಂಡರ ನಡುವಿನ ವೈಮನಸ್ಸಿನಿಂದಾಗಿ ಜೆಡಿಎಸ್ – ಕಾಂಗ್ರೆಸ್ ಪಕ್ಷಗಳ ಶಾಸಕರು ರಾಜೀನಾಮೆ ದಾರಿ ತುಳಿದಿದ್ದಾರೆ. ಸ್ಪೀಕರ್ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ರಾಜಕೀಯ ಕ್ಷಿಪ್ರ ಬೆಳವಣಿಗೆಯು ಸದನದ ಸಂಖ್ಯಾಬಲ ಹಾಗೂ ಮುಂದಿನ ಅಧಿಕಾರ ನಡೆಸುವ ಅವಕಾಶಗಳ ಬಗ್ಗೆ ಲೆಕ್ಕಾಚಾರಕ್ಕೆ ಕಾರಣವಾಗಿದೆ.
ಅತೃಪ್ತ ಶಾಸಕರ ರಾಜೀನಾಮೆ ಸ್ವೀಕಾರವಾದರೆ ಆಗ ಸದನದಲ್ಲಿ 210 ಶಾಸಕರ ಸಂಖ್ಯೆ ಇರುತ್ತದೆ. ಅಧಿಕಾರಕ್ಕೆ ಏರಲು ಮ್ಯಾಜಿಕ್ ಸಂಖ್ಯೆ 106 ಬೇಕಾಗುತ್ತದೆ. ಆ ಸಂದರ್ಭದಲ್ಲಿ ಬಿಜೆಪಿಯು ಬಿಎಸ್ಪಿ ಅಥವಾ ಪಕ್ಷೇತರ ಶಾಸಕರೊಬ್ಬರ ಸಹಾಯದಿಂದ ಸರಕಾರ ರಚನೆಗೆ ಮುಂದಾಗುವ ಲಕ್ಷಣಗಳಿವೆ.