ಎಂಎಲ್ಸಿಯಾಗಿರುವ ಸೂರಜ್ ರೇವಣ್ಣ ವೃತ್ತಿಯಲ್ಲಿ ವೈದ್ಯಕೀಯ ಪಡೆದವರು. ಜನರಲ್ ಸರ್ಜರಿ ವಿಭಾಗದಲ್ಲಿ ಉನ್ನತ ಪದವಿ ಪಡೆದಿದ್ದಾರೆ. ಎಚ್ ಡಿ ದೇವೇಗೌಡರ ಕುಟುಂಬದಲ್ಲಿ ರಾಜಕೀಯ ಪ್ರವೇಶಿಸಿದ ಎಂಟನೇ ವ್ಯಕ್ತಿ ಸೂರಜ್. ವೃತ್ತಿಯಲ್ಲಿ ವೈದ್ಯರಾಗಿದ್ದರೂ ರಾಜಕೀಯದಲ್ಲಿ ಆಸಕ್ತಿಯಿದ್ದರಿಂದ ಹೊಳೆನರಸೀಪುರದಲ್ಲಿ ಸ್ಥಳೀಯ ಮಟ್ಟದಲ್ಲಿ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. 2019 ರ ಲೋಕಸಭೆ ಚುನಾವಣೆ ವೇಳೆ ಸಹೋದರ ಪ್ರಜ್ವಲ್ ಗೆಲುವಿಗಾಗಿ ಶ್ರಮಿಸಿದ್ದರು.
ಯುವಕನ ಮೇಲೆ ಲೈಂಗಿಕ ದೌರ್ಜನ್ಯ
ಅತ್ತ ತಮ್ಮ ಪ್ರಜ್ವಲ್ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸಿದರೆ ಇತ್ತ ಅಣ್ಣ ಯುವಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೊಳಗಾಗಿದ್ದಾರೆ. ಸಂತ್ರಸ್ತ ಯುವಕನ ಹೇಳಿಕೆ ಪ್ರಕಾರ ಇದು ನಡೆದಿದ್ದು ಜೂನ್ 16 ರಂದು. ಹೊಳೆನರಸೀಪುರದ ತಮ್ಮ ಫಾರ್ಮ್ ಹೌಸ್ ನಲ್ಲಿ ಸೂರಜ್ ಕೃತ್ಯವೆಸಗಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ. ಈ ಸಂಬಂಧ ಸೂರಜ್ ಮೇಲೆ ಯವಕ ನೀಡಿದ ದೂರಿನಂತೆ ಈಗ ಕ್ರಮ ಕೈಗೊಳ್ಳಲಾಗಿದ್ದು, ಸೂರಜ್ ನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.