ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಎಚ್ ಡಿ ರೇವಣ್ಣ ಪುತ್ರರಾದ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣಗೆ ಇಂದು ಮಹತ್ವದ ದಿನವಾಗಿದೆ. ಇಬ್ಬರೂ ಇಂದು ಪೊಲೀಸ್ ವಶಕ್ಕೆ ಹೋಗುತ್ತಾರೋ, ಇಲ್ಲಾ ಜೈಲಿಗೆ ಹೋಗುತ್ತಾರೋ ಎಂದು ತೀರ್ಮಾನವಾಗಲಿದೆ.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದರು. ಆದರೆ ಎರಡು ಪ್ರಕರಣಗಳ ವಿಚಾರಣೆಗಾಗಿ ಎಸ್ ಐಟಿ ಮತ್ತೊಮ್ಮೆ ಅವರನ್ನು ವಶಕ್ಕೆ ಪಡೆದುಕೊಂಡಿತ್ತು. ಇಂದಿಗೆ ಅವರ ಎಸ್ ಐಟಿ ಕಸ್ಟಡಿ ಅಂತ್ಯವಾಗಲಿದೆ.
ಪ್ರಜ್ವಲ್ ತನಿಖೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಮತ್ತು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಎಸ್ ಐಟಿ ಆರೋಪಿಸಿದೆ. ಈ ಕಾರಣಕ್ಕೆ ಅವರನ್ನು ಮತ್ತಷ್ಟು ದಿನಗಳ ಕಾಲ ವಶಕ್ಕೆ ಪಡೆಯಲು ಎಸ್ ಐಟಿ ನ್ಯಾಯಾಲಯಕ್ಕೆ ಮನವಿ ಮಾಡುವ ಸಾಧ್ಯತೆಯಿದೆ.
ಇನ್ನೊಂದೆಡೆ ಪರಿಯಚಯದ ಯುವಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಪ್ರಜ್ವಲ್ ಅಣ್ಣ ಸೂರಜ್ ರೇವಣ್ಣರನ್ನು ನಿನ್ನೆ ಬಂಧಿಸಲಾಗಿತ್ತು. ಬಳಿಕ ಅವರನ್ನು ಕೋರ್ಟ್ ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು.
ಈ ಪ್ರಕರಣದ ವಿಚಾರಣೆಯನ್ನು ಸಿಐಡಿ ಪೊಲೀಸರು ಮಾಡುತ್ತಿದ್ದಾರೆ. ಇಂದು ವಿಚಾರಣೆಗಾಗಿ ಸಿಐಡಿ ಮತ್ತೆ ಸೂರಜ್ ರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಅಣ್ಣ-ತಮ್ಮನಿಗೆ ಇಂದು ಮಹತ್ವದ ದಿನವಾಗಿರಲಿದೆ. ಒಬ್ಬರಿಗೆ ಎಸ್ ಐಟಿ ಇನ್ನೊಬ್ಬರಿಗೆ ಸಿಐಡಿ ಕುಣಿಕೆ ಹಾಕಿದೆ.