ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಂಪುಟ ರಚನೆ ಹಿನ್ನಲೆಯಲ್ಲಿ ಈ ಶಾಸಕರು ಮಂತ್ರಿ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.
ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಹೀಗಂತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂ.ಚಂದ್ರಪ್ಪ ಭಾವಿ ಸಚಿವರು ಎಂಬ ಪೋಸ್ಟ್.
ಸಿಎಂ ಬಿ.ಎಸ್. ಯಡಿಯೂರಪ್ಪರ ಕಟ್ಟಾಳು ಎನಿಸಿಕೊಂಡಿರುವ ಎಂ. ಚಂದ್ರಪ್ಪಗೆ ಸಚಿವ ಸ್ಥಾನ ಕೊಡಬೇಕೆಂದು ಬೆಂಬಲಿಗರು ಒತ್ತಾಯಿಸಿದ್ದಾರೆ.
ಬಿಎಸ್ವೈ ಬಿಜೆಪಿ ಬಿಟ್ಟು ಕೆಜೆಪಿ ಪಕ್ಷ ಕಟ್ಟಿದಾಗ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಕೆಜೆಪಿ ಸೇರಿದ್ದರು ಎಂ.ಚಂದ್ರಪ್ಪ.
ಶಾಸಕ ಎಂ.ಚಂದ್ರಪ್ಪರ ಫೋಟೋ ಹಾಕಿ ಬಿಎಸ್ವೈ ಗೆ ಅಭಿನಂದನೆ ಸಲ್ಲಿಸಲಾಗಿದೆ.
ರಘುಚಂದನ್ ಅಭಿಮಾನಿಗಳು ಎಂಬ ಫೇಸ್ಬುಕ್ ಗ್ರೂಫ್ ನಿಂದ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ನೀವೆಲ್ಲೋ ನಾನಲ್ಲೆ ಎಂಬ ವಾಕ್ಯ ಬಳಸಿ ಪೋಸ್ಟ್ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಪ್ರಭಾವಿ ರಾಜಕಾರಣಿ ಎಂ. ಚಂದ್ರಪ್ಪಗೆ ಸಚಿವ ಸ್ಥಾನ ನೀಡಬೇಕೆಂದು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳಿಂದ ಪೋಸ್ಟ್ ಹರಿಬಿಡಲಾಗುತ್ತಿದೆ.