ಪೆಟ್ರೋಲ್ ಸುರಿದು ಕೊಂದದ್ದು ಯಾರನ್ನು?
ಆ ವ್ಯಕ್ತಿಯ ದೇಹಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಇಡಲಾಗಿತ್ತು. ಹೊತ್ತಿ ಉರಿಯುತ್ತಿದ್ದ ದೇಹವನ್ನು ನೋಡಿದ ಜನರು ಮಾಡಿದ್ದೇನು?
ಪೆಟ್ರೋಲ್ ಸುರಿದ ಕಾರಣ ಹೊತ್ತಿ ಉರಿಯುತ್ತಿತ್ತು ಅಪರಿಚಿತ ದೇಹ. ಅಪರಿಚಿತ ಶವ ಉರಿಯುತ್ತಿರೋದನ್ನ ಗಮನಿಸಿದ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ.
ಸ್ಥಳಕ್ಕೆ ಬಂದ ಪೊಲೀಸರಿಂದ ಹೊತ್ತಿ ಉರಿಯುತ್ತಿದ್ದ ಶವದ ಬೆಂಕಿ ನಂದಿಸಿ ಶವ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಶವ ಸುಟ್ಟು ಕರಕಲಾಗಿರೋದ್ರಿಂದ ಗುರುತ್ತು ಪತ್ತೆಯಾಗಿಲ್ಲ. ಸಾಕಷ್ಟು ಕುತೂಹಲ ಮೂಡಿಸಿದೆ ಅಪರಿಚಿತ ಶವದ ದಹನ ಪ್ರಕರಣ. ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.