ಐಶ್ವರ್ಯಾ ರೈ ಮ್ಯಾನೇಜರ್ ಬೆಂಕಿ ಪ್ರಕರಣದಲ್ಲಿ ಪುಕ್ಸಟೆ ಪ್ರಚಾರ ಪಡೆದರೇ ಶಾರುಖ್ ಖಾನ್?!

ಮಂಗಳವಾರ, 5 ನವೆಂಬರ್ 2019 (09:09 IST)
ಮುಂಬೈ: ಬಿಗ್ ಬಿ ಅಮಿತಾಭ್ ಬಚ್ಚನ್ ಮನೆಯಲ್ಲಿ ನಡೆದಿದ್ದ ದೀಪಾವಳಿ ಪಾರ್ಟಿಯಲ್ಲಿ ಐಶ್ವರ್ಯಾ ರೈ ಮ್ಯಾನೇಜರ್ ಅರ್ಚನಾ ಸದಾನಂದ್ ಗೆ ಬೆಂಕಿ ತಗುಲಿದ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಗೆ ಪುಕ್ಸಟೆ ಪ್ರಚಾರ ಸಿಕ್ಕಿತೇ?


ಅರ್ಚನಾ ಲೆಹಂಗಾಗೆ ಬೆಂಕಿ ತಗುಲಿದಾಗ ತಕ್ಷಣವೇ ಶಾರುಖ್ ಆಕೆಯ ನೆರವಿಗೆ ಧಾವಿಸಿ ಬೆಂಕಿ ನಂದಿಸಿದರು ಎಂದು ವರದಿಯಾಗಿತ್ತು. ಅಷ್ಟೇ ಅಲ್ಲದೆ, ಸಲ್ಮಾನ್ ಖಾನ್ ಸಹಿತ ಅನೇಕರು ಶಾರುಖ್ ರ ಹೀರೋಯಿಸಂನ್ನು ಹೊಗಳಿದ್ದರು. ಆದರೆ ಇದೀಗ ಇನ್ನೊಂದು ಮೂಲಗಳ ಪ್ರಕಾರ ಅಂದು ಅರ್ಚನಾರನ್ನು ಕಾಪಾಡಿದ್ದು, ಶಾರುಖ್ ಅಲ್ಲ, ಸ್ವತಃ ಐಶ್ವರ್ಯಾ ಎಂಬ ವರದಿ ಬಂದಿದೆ.

ಅರ್ಚನಾ ಲೆಹಂಗಾಗೆ ಬೆಂಕಿ ತಗುಲಿದಾಗ ಎಲ್ಲರೂ ದಿಕ್ಕೇ ತೋಚದೇ ನಿಂತಿದ್ದರೆ, ಐಶ್ವರ್ಯಾ ಆಕೆಯ ಕಡೆಗೆ ಧಾವಿಸಿ ಡ್ರೆಸ್ ನಲ್ಲಿ ಬೆಂಕಿ ತಗುಲಿದ ಭಾಗವನ್ನು ಹರಿದು ಕಾಪಾಡಿದ್ದರು ಎಂದು ಮಾಧ‍್ಯಮವೊಂದು ವರದಿ ಮಾಡಿದೆ. ಹೀಗಾಗಿ ಈ ಪ್ರಕರಣದಲ್ಲಿ ನಿಜವಾಗಿ ಅರ್ಚನಾರನ್ನು ಕಾಪಾಡಿದ್ದು ಶಾರುಖ್ ಅಲ್ಲ, ಐಶ್ವರ್ಯಾ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ