ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು?

ಬುಧವಾರ, 29 ಡಿಸೆಂಬರ್ 2021 (13:22 IST)
ಹಾಸನ : ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರು ವಿರೋಧ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು? ನಾನು ಪ್ರಧಾನಿಯಾಗಿದ್ದೆ, ಮುಖ್ಯಮಂತ್ರಿಯಾಗಿದ್ದೆ.

ಈ ದೇಶದಲ್ಲಿ ನನ್ನ ಕಾಲದಲ್ಲಿ ಮತಾಂತರ ಆಗುವ ಒಂದು ಘಟನೆ ನಡೀತಾ? ನನ್ನ ಆಡಳಿತದಲ್ಲಿ ಹಿಂದೂಸ್ಥಾನದಲ್ಲಿ, ಕರ್ನಾಟಕದಲ್ಲಿ ಮತಾಂತರ ಆಗಿದಿಯಾ? ಈಗ ಯಾಕೇ ಅದು ಶುರುವಾಯ್ತು ಎಂದು ಪ್ರಶ್ನಿಸಿದರು.

ಮತಾಂತರ ನಿಷೇಧ ಕಾಯ್ದೆ ಬಗ್ಗೆ ಕಾಂಗ್ರೆಸ್ ಕಾಲದಲ್ಲಿ ಬಿಲ್ ತಂದರೂ ಪಾಸಾಗಲಿಲ್ಲ. ಇವರು ಪಾಸ್ ಮಾಡಲು ಹೊರಟಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಈ ಬಗ್ಗೆ ತೀವ್ರವಾಗಿ ವಿರೋಧಿಸಿದ್ದಾರೆ.

ರೇವಣ್ಣ, ತಿಪ್ಪೇಸ್ವಾಮಿ ವಿರೋಧಿಸಿದ್ದಾರೆ. ಯಾರೂ ಅಧಿಕಾರ ನಡೆಸುತ್ತಾರೋ ಅವರು ಎಲ್ಲರ ವಿಶ್ವಾಸ ಗಳಿಸಿಕೊಂಡರೆ ಇವೆಲ್ಲಾ ಬರಲ್ಲ ಎಂದು ಕಿಡಿಕಾರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ